ಬೆಂಗಳೂರು,ಅಕ್ಟೋಬರ್,13,2026 (www.justkannada.in): ಸ್ಟಿಂಗ್ ಆಪರೇಷನ್ ಗೆ ನೀರೆರೆದು ಬೆಳೆಸಿದ್ದು ಡಿಕೆ ಶಿವಕುಮಾರ್. ಇದೀಗ ಹೆಮ್ಮರವಾಗಿದೆ. ಸ್ಟಿಂಗ್ ಆಪರೇಷನ್ ಬಗ್ಗೆ ಸಿಬಿಐ ತನಿಖೆಯಾಗಲಿ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಆಗ್ರಹಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ, ಸ್ಟಿಂಗ್ ಆಪರೇಷನ್ ಗೆ ನೀರೆರೆದು ಬೆಳೆಸದ್ದು ಡಿಕೆ ಶಿವಕುಮಾರ್. ಆದರ ಫಲ ಉಣ್ಣಲೇಬೇಕು. ಹೆಣ್ಣು ಮಕ್ಕಳ ಮರ್ಯಾದೆ ತೆಗೆದ ಪುಣ್ಯಾತ್ಮ ಡಿಕೆಶಿ. ಬ್ಲರ್ ಕೂಡ ಮಾಡದೇ ವಿಡಿಯೋ ಮಾಡಿದ್ರು. ಮಾಜಿ ಸಿಎಂ ತರ ಸ್ಟೇ ತೆಗೆದುಕೊಂಡಿಲ್ಲ ನಾವು ಎಂದು ಟಾಂಗ್ ಕೊಟ್ಟರು.
ಸ್ಟಿಂಗ್ ಆಪರೇಷನ್ ಪ್ರಕರಣವನ್ನ ಸಿಬಿಐಗೆ ಕೊಡಬೇಕು. ಸಿಬಿಐ ಬಿಟ್ಟರೆ ಬೇರೆ ಯಾವ ತನಿಖಾ ಸಂಸ್ಥೆಯಿಂದಲೂ ತನಿಖೆ ಸಾಧ್ಯವಿಲ್ಲ. ಸಿದ್ದರಾಮಯ್ಯನವರಿಂದ ನಾನು ಬಯಸಿದ್ದೇ ಬೇರೆ. ಡಿಕೆಶಿ ಅವರನ್ನ ಸಿಎಂ ಎಂದು ನಾನು ಒಪ್ಪಿಕೊಳ್ಳಲ್ಲ. 8 ವರ್ಷ ಸಿಎಂ ಆಗಿದ್ದವರನ್ನ ಈ ಗತಿಗೆ ತಂದಿದ್ಯಲ್ಲ. ಇದು ನಿಲ್ಲಬೇಕೆಂದರೆ ಸಿದ್ದರಾಮಯ್ಯನವರ ಹಳೆಯ ಧ್ವನಿ ಹೊರಬರಲಿ. ನಾನೊಬ್ಬ ಹೇಳಿದರೆ ಆಗಲ್ಲ ಧರ್ಮದ ಬಗ್ಗೆ ಮಾತನಾಡುವ ಡಿಕೆಶಿ ಸ್ಟಿಂಗ್ ಆಪರೇಷನ್ ಪ್ರಕರಣವನ್ನ ಸಿಬಿಐ ತನಿಖೆಗೆ ಕೊಡಲಿ ಎಂದು ಹೆಚ್ ಡಿಕೆ ತಿಳಿಸಿದರು.
DK Shivakumar, nurtured, sting operation, handed over, CBI, HDK demands.







