Tuesday, September 22, 2026

BDA Apartments

ತಕ್ಷಣವೇ ಉಕ್ರೇನ್ ರಾಜಧಾನಿ ಕೀವ್ ತೊರೆಯುವಂತೆ ಭಾರತೀಯರಿಗೆ ಸೂಚನೆ BDA JK_Adv BDA Adv
Home Front Page ತಕ್ಷಣವೇ ಉಕ್ರೇನ್ ರಾಜಧಾನಿ ಕೀವ್  ತೊರೆಯುವಂತೆ ಭಾರತೀಯರಿಗೆ ಸೂಚನೆ.

ತಕ್ಷಣವೇ ಉಕ್ರೇನ್ ರಾಜಧಾನಿ ಕೀವ್  ತೊರೆಯುವಂತೆ ಭಾರತೀಯರಿಗೆ ಸೂಚನೆ.

ಕೀವ್,ಮಾರ್ಚ್,1,2022(www.justkannada.in): ಉಕ್ರೇನ್ ಮೇಲೆ ರಷ್ಯಾ ಸೇನೆಯ ದಾಳಿ ಮುಂದುರೆದಿದ್ದು, ಉಕ್ರೇನ್​ನಲ್ಲಿ ಸಿಲುಕಿರುವ ಜನರ ಪಾಡು ಹೇಳಿತೀರದಂತಿದೆ.  ಅಲ್ಲಿಂದ ತಪ್ಪಿಸಿಕೊಂಡು ಬರುತ್ತಿರುವವರ ಜೀವನ ಅಕ್ಷರಶಃ ನರಕವಾಗಿದೆ. ಜೀವ ಉಳಿಸಿಕೊಳ್ಳುವ ಆಸೆಯಿಂದ ಗಡಿ ದಾಟಿ ಬರುವವರಿಗೂ ಸಂಕಷ್ಟ ತಪ್ಪಿದ್ದಲ್ಲ. ಉಕ್ರೇನ್​ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ಸಂಕಷ್ಟ ಪರಿಸ್ಥಿತಿ ಅನುಭವಿಸುತ್ತಿದ್ದಾರೆ.

ಈ ಮಧ್ಯೆ ಉಕ್ರೇನ್ ರಾಜಧಾನಿ ಕೀವ್ ನಗರದ ಮೇಲೆ ರಷ್ಯಾ ದಾಳಿ ನಡೆಸಿ ಯಾವ ಕ್ಷಣದಲ್ಲಾದರೂ ವಶಕ್ಕೆ ಪಡೆಯಬಹುದು. ಹೀಗಾಗಿ ಕೀವ್ ನಲ್ಲಿರುವ ಭಾರತೀಯರು ತಕ್ಷಣವೇ  ಕೀವ್ ತೊರಯುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ ಎನ್ನಲಾಗಿದೆ.ತಕ್ಷಣವೇ ಉಕ್ರೇನ್ ರಾಜಧಾನಿ ಕೀವ್ ತೊರೆಯುವಂತೆ ಭಾರತೀಯರಿಗೆ ಸೂಚನೆ russian

ಅಲ್ಲದೆ ಈ ಸಂಬಂಧ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರ   ಭಾರತೀಯರ ಸ್ಥಳಾಂತರಕ್ಕೆ ವಾಯುಸೇನೆಯನ್ನ ಕಳುಹಿಸಿದೆ. ಉಕ್ರೇನ್ ರಾಜಧಾನಿ ಕೀವ್​ ಮೇಲಿನ ದಾಳಿಗೆ  ರಷ್ಯಾ ಸೇನೆ ಸಿದ್ಧತೆ ಮಾಡಿಕೊಂಡಿದೆ. ನಗರದಿಂದ ಹೊರಗೆ ಹೋಗಬೇಕು ಎಂದು ಜನರಿಗೆ ರಷ್ಯಾ ಸೇನೆ ತಾಕೀತು ಮಾಡುತ್ತಿದೆ. ಈ ನಡುವೆ ವಿಶ್ವದ ಹಲವು ದೇಶಗಳು ಉಕ್ರೇನ್​ಗೆ ನೆರವು ಘೋಷಿಸಿವೆ.

Key words: Indians – leave- Ukraine-Kiev