ರೈಲ್ವೆಯಲ್ಲಿ ಟಿಕೆಟ್ ರಹಿತ ಪ್ರಯಾಣಕ್ಕೆ ದಂಡ ದ್ವಿಗುಣ: ಜುಲೈ 1ರಿಂದ ಹೊಸ ನಿಯಮ ಜಾರಿ

Mysuru, June 22: Indian Railways will implement revised penalty provisions under the Jan Vishwas (Amendment of Provisions) Act, 2026, from July 1. The minimum penalty for travelling without a valid ticket or pass has been increased from ₹250 to ₹500. The same minimum charge will apply to passengers travelling beyond the permitted distance on their tickets. Additionally, unauthorized hawking on railway premises will attract a ₹2,000 fine, men travelling in coaches reserved for women will face a ₹2,500 penalty, and smoking in prohibited railway areas will invite a ₹2,000 fine.

 

ಮೈಸೂರು, ಜೂ.22: ಜನ ವಿಶ್ವಾಸ್ (ತಿದ್ದುಪಡಿ ವಿಧಿಗಳ) ಕಾಯ್ದೆ-2026ರಡಿ ಭಾರತೀಯ ರೈಲ್ವೆ ಟಿಕೆಟ್ ರಹಿತ ಪ್ರಯಾಣ ಸೇರಿದಂತೆ ಹಲವು ಉಲ್ಲಂಘನೆಗಳಿಗೆ ವಿಧಿಸುವ ದಂಡದ ಮೊತ್ತವನ್ನು ಹೆಚ್ಚಿಸಿದೆ. ಪರಿಷ್ಕೃತ ನಿಯಮಗಳು ಜುಲೈ 1ರಿಂದ ಜಾರಿಗೆ ಬರಲಿವೆ.

ಹೊಸ ನಿಯಮಗಳ ಪ್ರಕಾರ, ಟಿಕೆಟ್ ಅಥವಾ ಪಾಸ್ ಇಲ್ಲದೆ ಪ್ರಯಾಣಿಸುವವರಿಗೆ ವಿಧಿಸಲಾಗುವ ಕನಿಷ್ಠ ದಂಡ ₹250ರಿಂದ ₹500ಕ್ಕೆ ಏರಿಕೆಯಾಗಿದೆ. ಅನುಮತಿಸಿದ ದೂರಕ್ಕಿಂತ ಹೆಚ್ಚಿನ ದೂರ ಪ್ರಯಾಣಿಸಿದರೂ ಕನಿಷ್ಠ ಹೆಚ್ಚುವರಿ ದಂಡ ₹500 ಆಗಲಿದೆ. ಆದರೆ ಗರಿಷ್ಠ ಶಿಕ್ಷೆಯಲ್ಲಿ ಯಾವುದೇ ಬದಲಾವಣೆ ಇಲ್ಲ.

ಇದೇ ವೇಳೆ, ಅನಧಿಕೃತ ವ್ಯಾಪಾರ (ಹಾಕಿಂಗ್) ನಡೆಸಿದರೆ ₹2,000, ಮಹಿಳೆಯರ ಮೀಸಲು ಬೋಗಿಯಲ್ಲಿ ಪುರುಷರು ಪ್ರಯಾಣಿಸಿದರೆ ₹2,500 ಹಾಗೂ ರೈಲು ಅಥವಾ ರೈಲ್ವೆ ಆವರಣದ ನಿಷೇಧಿತ ಪ್ರದೇಶಗಳಲ್ಲಿ ಧೂಮಪಾನ ಮಾಡಿದರೆ ₹2,000 ದಂಡ ವಿಧಿಸಲಾಗುತ್ತದೆ.

ಈ ಕ್ರಮವು ಟಿಕೆಟ್ ರಹಿತ ಪ್ರಯಾಣ ತಡೆದು, ರೈಲ್ವೆ ಆದಾಯ ಸಂರಕ್ಷಣೆ ಹಾಗೂ ಪ್ರಯಾಣಿಕರ ಶಿಸ್ತನ್ನು ಬಲಪಡಿಸುವ ಉದ್ದೇಶ ಹೊಂದಿದೆ ಎಂದು ಮೈಸೂರು ವಿಭಾಗದ ವಾಣಿಜ್ಯ ವ್ಯವಸ್ಥಾಪಕ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಗಿರೀಶ್ ಧರ್ಮರಾಜ್ ಕಲಗೊಂಡ ತಿಳಿಸಿದ್ದಾರೆ.

Key words: Indian Railways, Ticketless Travel, Railway Rules, Jan Vishwas Act, Mysuru Division,

SUMMARY:

Railways Hike Penalty for Ticketless Travel from July 1

Mysuru, June 22: Indian Railways will implement revised penalty provisions under the Jan Vishwas (Amendment of Provisions) Act, 2026, from July 1.

file photo

The minimum penalty for travelling without a valid ticket or pass has been increased from ₹250 to ₹500. The same minimum charge will apply to passengers travelling beyond the permitted distance on their tickets.

Additionally, unauthorized hawking on railway premises will attract a ₹2,000 fine, men travelling in coaches reserved for women will face a ₹2,500 penalty, and smoking in prohibited railway areas will invite a ₹2,000 fine.

The move aims to curb ticketless travel, improve passenger discipline, and protect railway revenue.

#IndianRailways #TicketlessTravel #RailwayRules #JanVishwasAct #MysuruDivision