Wednesday, August 19, 2026

BDA Apartments

Home Front Page Paris Olympics: ಫೈನಲ್ ಪ್ರವೇಶಿಸಿದ ಭಾರತದ ಮನು ಭಾಕರ್

Paris Olympics: ಫೈನಲ್ ಪ್ರವೇಶಿಸಿದ ಭಾರತದ ಮನು ಭಾಕರ್

ಪ್ಯಾರಿಸ್,ಜುಲೈ,27,2024 (www.justkannada.in):  ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಶೂಟರ್ ಮನು ಭಾಕರ್ ಫೈನಲ್‌ ಗೆ  ಲಗ್ಗೆ ಇಟ್ಟಿದ್ದಾರೆ.

ಶೂಟಿಂಗ್‌ನಲ್ಲಿ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ22 ವರ್ಷದ  ಮನು ಭಾಕರ್ ಅಂತಿಮ ಸುತ್ತಿಗೆ ಪ್ರವೇಶಿಸಿದ್ದಾರೆ. ಇಂದು ನಡೆದ ಅರ್ಹತಾ ಸುತ್ತಿನಲ್ಲಿ 580 ಅಂಕ ಪಡೆದ ಮನು, ಮೂರನೇಯವರಾಗಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಆ ಮೂಲಕ ಪದಕದ ನಿರೀಕ್ಷೆ ಮೂಡಿಸಿದ್ದಾರೆ.

ಹಂಗೇರಿಯ ವೆರೊನಿಕಾ ಮೇಜರು 582 ಅಂಕಗಳೊಂದಿಗೆ ಅಗ್ರಸ್ಥಾನಿಯಾಗಿ ಫೈನಲ್‌ ಗೆ ಲಗ್ಗೆ ಇಟ್ಟರು. ನಾಳೆ ಭಾರತೀಯ ಕಾಲಮಾನ ಮಧ್ಯಾಹ್ನ 3.30ಕ್ಕೆ ಫೈನಲ್ ನಡೆಯಲಿದೆ.

Key words: India, Manu Bhakar, final,Paris Olympics