Sunday, September 20, 2026

BDA Apartments

ಟೋಕಿಯೋ ನಗರದಲ್ಲಿ ಹೆಚ್ಚಿದ ಕೊರೊನಾ ಪ್ರಕರಣ: ಒಲಂಪಿಕ್ಸ್’ಗೆ ಆತಂಕ BDA JK_Adv BDA Adv
Home Front Page ಟೋಕಿಯೋ ನಗರದಲ್ಲಿ ಹೆಚ್ಚಿದ ಕೊರೊನಾ ಪ್ರಕರಣ: ಒಲಂಪಿಕ್ಸ್’ಗೆ ಆತಂಕ

ಟೋಕಿಯೋ ನಗರದಲ್ಲಿ ಹೆಚ್ಚಿದ ಕೊರೊನಾ ಪ್ರಕರಣ: ಒಲಂಪಿಕ್ಸ್’ಗೆ ಆತಂಕ

ಬೆಂಗಳೂರು, ಜುಲೈ  28, 2021 (www.justkannada.in): 

ಕೊರೊನಾವೈರಸ್ ಆರಂಭವಾದ ಬಳಿಕ ಟೋಕಿಯೋದಲ್ಲಿ ವೈರಸ್ ದಾಖಲೆ ಬರೆದಿದೆ.  ಕೊರೊನಾ ಆತಂಕ ಮತ್ತಷ್ಟು ಹೆಚ್ಚಾಗುತ್ತಿದೆ.

ಕಳೆದ 24 ಗಂಟೆಗಳಲ್ಲಿ ಈವರೆಗಿನ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿದೆ.ಜುಲೈ 27ರಂದು ಟೋಕಿಯೋ ನಗರದಲ್ಲಿ ಒಂದೇ ದಿನ 2848 ಹೊಸ ಕೋವಿಡ್ ಪ್ರಕರಣಗಳು ಟೋಕಿಯೋ ನಗರದಲ್ಲಿ ದಾಖಲಾಗಿದೆ.

ಟೋಕಿಯೋ ನಗರದಲ್ಲಿ ಈಗಾಗಲೇ ಕೊರೊನಾವೈರಸ್‌ನ ಹಾವಳಿಯಿಂದಾಗಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಇದೇ ಸಂದರ್ಭದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ಕೂಡ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ನಡೆಸಲಾಗುತ್ತಿದೆ.

ಡೆಲ್ಟಾ ರೂಪಾಂತರಿ ವೈರಸ್‌ನ ಪ್ರಕರಣಗಳು ಹೆಚ್ಚಾಗುತ್ತಿದ್ದು ಜಪಾನ್‌ನಲ್ಲಿ ಕೋರೊನಾವೈರಸ್‌ನ ಐದನೇ ಅಲೆ ಕಾಣಿಸಿಕೊಳ್ಳುತ್ತಿದೆ.