ಕೃಷ್ಣಾ ನದಿಯಲ್ಲಿ  ಒಳಹರಿವು ಹೆಚ್ಚಳ ಹಿನ್ನೆಲೆ: ಹಲವು ಗ್ರಾಮಗಳಲ್ಲಿ ಪ್ರವಾಹ ಭೀತಿ: ಎನ್ ಡಿಆರ್ ಎಫ್ ತಂಡದಿಂದ ರಕ್ಷಣಾ ಕಾರ್ಯ…

ಬೆಳಗಾವಿ,ಆ,4,2019(www.justkannada.in):  ಮಹಾರಾಷ್ಟ್ರದಲ್ಲಿ ಮಳೆರಾಯನ ಅಬ್ಬರದಿಂದಾಗಿ ಕೃಷ್ಣಾನದಿಗೆ ಒಳಹರಿವು ಹೆಚ್ಚಾಗಿದ್ದು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರವಾಹದ ಭೀತಿ ಉಂಟಾಗಿದೆ.

ಕೃಷ್ಣಾ ನದಿ ಬೊರ್ಗರೆದು ಹರಿಯುತ್ತಿದ್ದು ಈ ಹಿನ್ನೆಲೆ ಬಾಗಲಕೋಟೆ ಜಿಲ್ಲೆಯ, ಜಮಖಂಡಿ ತಾಲ್ಲೂಕಿನ ನದಿ ತೀರದ 20 ಹಳ್ಳಿಗಳಲ್ಲಿ ಪ್ರವಾಹ ಭೀತಿ ಉಂಟಾಗಿದೆ. ನಾಲ್ಕು ಗ್ರಾಮಗಳು ನಡುಗಡ್ಡೆಯಂತಾಗಿದೆ. ತುಬಚಿ, ಶೂರ್ಪಾಲಿ, ಮುತ್ತೂರು, ಕಂಕನವಾಡಿ. ಮತ್ತೂರು ಗ್ರಾಮ ಹಾಗೂ ತೋಟದ ವಸತಿ ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಠಿಸಿದೆ.

ನದಿ ತೀರದ ಗ್ರಾಮಸ್ಥರ ಸುರಕ್ಷತೆಗೆ ಜಿಲ್ಲಾಡಳಿತ ಮುಂಜಾಗೃತಾ ವ್ಯವಸ್ಥೆ ಮಾಡಿಕೊಂಡಿದೆ.  ಸಂತ್ರಸ್ತರ ಸುರಕ್ಷತೆಗೆ 14 ಬೋಟ್ ಗಳು. 50 ಜನ ನುರಿತ ಈಜುಗಾರರ ನೇಮಕ ಮಾಡಲಾಗಿದೆ. 21 ಜನ ನೋಡಲ್ ಅಧಿಕಾರಿಗಳ ನೇಮಕ.6 ಜನ ಹಾವು ಹಿಡಿಯುವವರ ನಿಯೋಜನೆ ಮಾಡಲಾಗಿದೆ

1 ಸಹಾಯವಾಣಿ ಕೇಂದ್ರ ತೆರೆಯಲಾಗಿದ್ದು  08353- 220023 ಹೆಲ್ಪ್ ಲೈನ್ ನಂಬರ್ ಆಗಿದೆ. ನದಿ ತೀರದ ಗ್ರಾಮಗಳ ಜನರಿಗೆ ಸುರಕ್ಷತಾ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

ಕೃಷ್ಣಾ ನದಿಯಲ್ಲಿ ಪ್ರವಾಹ ಹಿನ್ನೆಲೆ, ರಾಯಚೂರಿನಲ್ಲಿ ರಕ್ಷಣಾ ಕಾರ್ಯಕ್ಕೆ ಎನ್ ಡಿಆರ್ ಎಫ್ ಸಿದ್ದವಾಗಿದೆ. ಎನ್ ಡಿ ಆರ್ ಎಫ್ ನ 30 ಜನರ ತಂಡದಿಂದ ರಕ್ಷಣಾ ಕಾರ್ಯ ನಡೆಸಲಿದ್ದು, ಎರಡು ಬೋಟ್ ಸೇರಿ ಅಗತ್ಯ ಸಾಮಗ್ರಿಗಳೊಂದಿಗೆ ತಂಡ ಆಗಮಿಸಿದೆ. …

ಅಗತ್ಯತೆ ಬಂದಾಗ ರಕ್ಷಣಾ ತಂಡವನ್ನ ಬಳಸಿಕೊಳಸಿಕೊಳ್ಳಲು ಜಿಲ್ಲಾಡಳಿತ ನಿರ್ಧಾರ ಮಾಡಿದ್ದು 15 ಜನರ ಎರಡು ತಂಡಗಳು ರಕ್ಷಣಾ ಕಾರ್ಯ ನಿರ್ವಹಿಸಲಿವೆ. ಶಕ್ತಿನಗರದ ಕೃಷ್ಣ ಹಾಗೂ ಶಕ್ತಿ ಗೆಸ್ಟ್ ಹೌಸ್ ನಲ್ಲಿ ಎನ್ ಡಿ ಆರ್ ಎಫ್ ತಂಗಿದ್ದು, ಟೀಮ್ ಕಮಾಂಡರ್ ಮಹೇಶ್ ಪಾರಿಕ್ ನೇತೃತ್ವದಲ್ಲಿ ಕಾರ್ಯಚರಣೆ ನಡೆಯಲಿದೆ.

ಪಶ್ಚಿಮ ಘಟ್ಟಗಳ ಸಾಲಿನಲ್ಲಿ  ಧಾರಾಕಾರ ಮಳೆ ಮುಂದುವರೆದಿದ್ದು ಮೂಡಿಗೆರೆ ಚಾರ್ಮಾಡಿ ಘಾಟ್ ಕಳಸ ಶೃಂಗೇರಿ ಕೊಟ್ಟಿಗೆಹಾರ ಸೇರಿದಂತೆ ಹಲವು ಕಡೆ ವರುಣನ ಆರ್ಭಟ ಜೋರಾಗಿದೆ.  ಚಾರ್ಮಾಡಿ ಘಾಟ್ ನಲ್ಲಿ ಧಾರಾಕಾರ ಮಳೆಯಿಂದ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

Key words: Increase – inflow – Krishna River- Rescue operation – flood – NDRF