ಸರ್ಕಾರಿ ವೈದ್ಯರನ್ನು ಏಕ ವಚನದಲ್ಲಿ ನಿಂಧನೆ : ಸ್ಪೀಕರ್ ಆಯ್ತು, ಇದೀಗ ಜಿ.ಪಂ.ಸದಸ್ಯನ ಸರದಿ..

 

ಕೋಲಾರ, ಆ.04, 2019 : (www.justkannada.in news) ಕಳೆದ ವಾರವಷ್ಟೆ ಜಿಲ್ಲೆಯಲ್ಲಿ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್, ವೈದ್ಯರ ವಿರುದ್ಧ ಏಕ ವಚನದಲ್ಲಿ ವಾಗ್ದಾಳಿ ನಡೆಸಿ ನಿಂದಿಸಿದ್ದರು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಅಂಥದ್ದೆ ಘಟನೆಗೆ ಜಿಲ್ಲೆ ಸಾಕ್ಷಿಯಾಗಿದೆ.
ಈ ಬಾರಿ, ಸರ್ಕಾರಿ ವೈದ್ಯರನ್ನು ಏಕ ವಚನದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಜಿಲ್ಲಾ ಪಂಚಾಯಿತಿ ಸದಸ್ಯ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಘಟನೆ.
ಶ್ರೀನಿವಾಸಪುರ ತಾಲ್ಲೂಕಿನ ದಳಸನೂರು ಜಿಲ್ಲಾ ಪಂಚಾಯಿತಿ ಸದಸ್ಯ ಎಂ ವಿ ಶ್ರೀನಿವಾಸ್ ಅವರಿಂದ ಅನುಚಿತ ವರ್ತನೆ.
ಶೌಚಾಲಯ ಶುದ್ದವಿಲ್ಲವೆಂದು ಕರ್ತವ್ಯ ನಿರತ ವೈದ್ಯರನ್ನ ಅವಾಚ್ಯ ಶಬ್ದಗಳಿಂದ ಏಕವಚನದಲ್ಲಿ ನಿಂದಿಸಿ ದರ್ಪ ತೋರಿದ್ದಾರೆ ಎಂದು ದೂಷಿಸಲಾಗಿದೆ.
ಶೌಚಾಲಯ ಶುಚಿಗೊಳಿಸಲು ಆಸ್ಪತ್ರೆಗೆ ನೀರಿನ ಸೌಲಭ್ಯವಿಲ್ಲವೆಂದು ಸಿಬ್ಬಂದಿ ಹೇಳುತ್ತಿದ್ದರೂ ಕೇಳದ ಸ್ಥಿತಿಯಲ್ಲಿ ಸಾರ್ವಜನಿಕರ ಮುಂದೆಯೇ ವೈದ್ಯರ ಮೇಲೆ ದರ್ಪ ತೋರಿದ ಜಿ.ಪಂ ಸದಸ್ಯ.
ಕೊನೆಗೆ ನಿಮ್ಮನ್ನು ನೋಡಿಕೊಳ್ಳುವುದಾಗಿ ಸಿಬ್ಬಂದಿಗೆ ಬೆದರಿಕೆ ಹಾಕಿದ ಜಿಲ್ಲಾ ಪಂಚಾಯಿತಿ ಸದಸ್ಯ ಎಂ ವಿ ಶ್ರೀನಿವಾಸ್.

key words : governament-doctor-abuse-zillapanchayath-member-kolar