ಮುದ್ದೆ ಉಂಡು, ನಿದ್ದೆ ಮಾಡ್ಕೊಂಡಿರಿ : ಹಳ್ಳಿ ಹಕ್ಕಿಗೆ ಟಾಂಗ್ ನೀಡಿದ ಮಾಜಿ ಗೆಳೆಯ…

ಬಾಗಲಕೋಟೆ, ಆ.04, 2019 : (www.justkannada.in news) ಮಾಜಿ ಸಚಿವ, ಅನರ್ಹ ಶಾಸಕ ಎಚ್.ವಿಶ್ವನಾಥಗೆ
ಗುಳೇದಗುಡ್ಡ ಕ್ಷೇತ್ರದ ಮಾಜಿ ಶಾಸಕ ನಂಜಯ್ಯನಮಠ ಟಾಂಗ್.

ಅನರ್ಹ ಶಾಸಕರು ಸೇರಿ ಹೊಸ ಪಕ್ಷ ಕಟ್ಟುವೆ ಎಂದಿದ್ದ ಎಚ್.ವಿಶ್ವನಾಥಗೆ ಕಾಂಗ್ರೆಸ್ ಮುಖಂಡ ತಿರುಗೇಟು ನೀಡಿದ್ದು ಹೀಗೆ…

ನಿಮ್ಮ ಕಾಲು, ಆರೋಗ್ಯ ಸರಿಯಿಲ್ಲ. ಹೊಸ ಪಕ್ಷ ಕಟ್ಟುವ ದುಸ್ಸಾಹಸ ಮಾಡಬೇಡಿ. ಕಾಂಗ್ರೆಸ್ ನಲ್ಲಿ ಬೆಳೆದಿರಿ, ಜೆಡಿಎಸ್ ನಲ್ಲಿ ಪುನರ್ಜನ್ಮ ಪಡೆದಿರಿ. ಕೊನೆಗೆ ಜೆಡಿಎಸ್ ನ ಜೀವವನ್ನು ತೆಗೆದುಕೊಂಡಿದ್ದೀರಿ. ನಿಮ್ಮ ಕ್ಷೇತ್ರದಲ್ಲಿ ನಿಮಗೆ ಮಂಗಳಾರತಿ ಮಾಡಲು ಮತದಾರರು ಸಿದ್ದರಾಗಿದ್ದಾರೆ. ಹೊಸ ಪಕ್ಷವನ್ನು ಕಟ್ಟಿ, ಇದ್ದದ್ದನ್ನು ಕಳೆದುಕೊಂಡವರ ಇತಿಹಾಸ ನೋಡಿಲ್ಲವೆ?

ದೇವರಾಜ ಅರಸು, ಬಂಗಾರಪ್ಪನವರು, ಆರ್.ಗುಂಡೂರಾಯರು, ಯಡಿಯೂರಪ್ಪನವರ, ಬಿ.ಶ್ರೀರಾಮಲು ಅವರ ಪರಿಸ್ಥಿತಿ ಏನಾಯಿತು ಅರ್ಥ ಮಾಡಿಕೊಳ್ಳಿ.

ವಿಶ್ವನಾಥ ಅವರೇ ಬುದ್ದಿವಂತರಿದ್ದೀರಿ. ಹೆಚ್ಚಿಗೆ ಓದಿರಿ, ಹೆಚ್ಚಿಗೆ ಬರೆಯಿರಿ. ಹೊಟ್ಟೆ ತುಂಬ ಮುದ್ದೆ ಊಟ ಮಾಡಿ , ಕಣ್ಣು ತುಂಬ ನಿದ್ದೆ ಮಾಡಿರಿ.
ಹಳೆಯ ಸ್ನೇಹಿತ ವಿಶ್ವನಾಥಗೆ ಸಲಹೆ ರೂಪದಲ್ಲಿ ಟಾಂಗ್ ನೀಡಿರುವ ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ.

 

key words : adaguru.h.vishvanath-rebel-mla-mysore-congress