ಶೂಟಿಂಗ್ ಲೋಕೇಷನ್ ಹುಡುಕುತ್ತಿದೆ ‘ರಾಜ ವೀರಮದಕರಿ ನಾಯಕ’ ಟೀಂ

ಬೆಂಗಳೂರು, ಡಿಸೆಂಬರ್ 02, 2020 (www.justkannada.in): ‘ರಾಜವೀರಮದಕರಿನಾಯಕ’ ಸಿನಿಮಾದ ಎರಡನೇ ಹಂತದ ಚಿತ್ರೀಕರಣಕ್ಕೆ ಲೋಕೇಷನ್ ಹುಡುಕಾಟ ಶುರುವಾಗಿದೆ.

ಹೌದು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಲಿರುವ ಮತ್ತೊಂದು ಐತಿಹಾಸಿಕ ಸಿನಿಮಾ ‘ರಾಜವೀರಮದಕರಿನಾಯಕ’ ಸಿನಿಮಾದ ಮುಂದಿನ ಹಂತದ ಚಿತ್ರೀಕರಣಕ್ಕೆ ಸಿದ್ಧತೆ ಸಾಗಿದೆ.

ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ನೇತೃತ್ವದ ತಂಡ ಕುಮ್ಟಾದ ಮಿರ್ಜಾನ್ ಕೋಟೆಗೆ ಭೇಟಿ ನೀಡಿ ಲೊಕೇಷನ್ ಪರಿಶೀಲಿಸಿದೆ. ಮೊದಲನೇ ಹಂತವನ್ನು ಕೇರಳದಲ್ಲಿ ಚಿತ್ರೀಕರಿಸಲಾಗಿತ್ತು.

ಇದೀಗ ದ್ವಿತೀಯ ಹಂತದ ಚಿತ್ರೀಕರಣ ಮಿರ್ಜಾನ್ ಕೋಟೆಯ ಸುತ್ತಮುತ್ತಲ ಪ್ರದೇಶದಲ್ಲಿ ನಡೆಯುವುದು ಬಹುತೇಕ ಖಚಿತವಾಗಿದೆ ಎಂದು ಚಿತ್ರತಂಡ ತಿಳಿಸಿದೆ.