ಅನುಷ್ಕಾ ಯೋಗಾಸನಕ್ಕೆ ಕೊಯ್ಲಿ ನೆರವು ! ಫೋಟೋ ಆಯ್ತು ವೈರಲ್

ಬೆಂಗಳೂರು, ಡಿಸೆಂಬರ್ 02, 2020 (www.justkannada.in): ಸಾಮಾಜಿಕ ಜಾಲತಾಣದಲ್ಲಿ ಹಳೆಯ ಫೋಟೋವನ್ನು ಹಂಚಿಕೊಂಡಿರುವ ಅನುಷ್ಕಾ ಶರ್ಮಾ, ಗರ್ಭವತಿಯಾದ ಸಮಯದಲ್ಲೂ ಯೋಗ ಮಾಡುವುದು ಮುಖ್ಯ ಎಂದು ಹೇಳಿದ್ದಾರೆ.

ವಿಶೇಷ ಎಂದರೆ ಗರ್ಭಿಣಿಯಾಗಿರುವ ಪತ್ನಿ ಅನುಷ್ಕಾ ಶರ್ಮಾ ಅವರಿಗೆ ಶೀರ್ಷಾಸನ ಮಾಡಲು ವಿರಾಟ್ ಕೊಹ್ಲಿ ಸಹಾಯ ಮಾಡಿದ್ದು, ಈಗ ಈ ಫೋಟೋ ವೈರಲ್ ಆಗಿದೆ.

ಸದ್ಯ ಈ ಫೋಟೋ ಟ್ವಿಟ್ಟರಿನಲ್ಲಿ ಟ್ರೆಂಡ್ ಆಗಿದ್ದು, ರಕುಲ್ ಪ್ರೀತ್ ಸಿಂಗ್ ಮತ್ತು ಮೌನಿ ರಾಯ್ ಸೇರಿದಂತೆ ಹಲವಾರು ನಟ-ನಟಿಯರು ಅನುಷ್ಕಾ ಫೋಟೋಗೆ ಕಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇಂದು ಗೋಡೆಯ ಮತ್ತು ನನ್ನ ಪ್ರೀತಿಯ ಗಂಡನ ಸಹಾಯದಿಂದ ಬ್ಯಾಲೆನ್ಸ್ ಮಾಡುತ್ತಿದ್ದೇನೆ. ಗರ್ಭಿಣಿಯಾದ ಸಮಯದಲ್ಲೂ ನಾನು ಈ ರೀತಿಯ ಅಭ್ಯಾಸ ಮಾಡುತ್ತಿರುವುದಕ್ಕೆ ನನಗೆ ಖುಷಿಯಾಗುತ್ತಿದೆ ಎಂದು ಅನುಷ್ಕಾ ಬರೆದುಕೊಂಡಿದ್ದಾರೆ.