ಅವರೇನು ಮೋದಿನಾ, ಅಮಿತ್ ಶಾ ನಾ..?: ಪದೇ ಪದೇ ನನ್ನ ಬಾಯಲ್ಲಿ ಅವರ ಹೆಸರನ್ನೇಕೆ ಹೇಳಿಸುತ್ತೀರಿ- ಶಾಸಕ ರೇಣುಕಾಚಾರ್ಯ ಗರಂ…

ಬೆಂಗಳೂರು,ಡಿಸೆಂಬರ್,2,2020(www.justkannada.in):  ವಿಧಾನಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡುವುದಾಗಿ ಸಿಎಂ ಬಿಎಸ್ ಯಡಿಯೂರಪ್ಪ ನಿನ್ನೆಯಷ್ಟೇ ಹೇಳಿದ್ದು ಸೋತವರಿಗೆ ಸಚಿವ ಸ್ಥಾನ ನೀಡಲು ಶಾಸಕ ಎಂ.ಪಿ ರೇಣುಕಾಚಾರ್ಯ ಸೇರಿ ಹಲವು ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.logo-justkannada-mysore

ಇನ್ನು ಸಿ.ಪಿ ಯೋಗೇಶ್ವರ್ ಗೆ ಸಚಿವ ಸ್ಥಾನ ಕುರಿತು ಇಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಗರಂ ಆದ ಶಾಸಕ ಎಂ ಪಿ ರೇಣುಕಾಚಾರ್ಯ, ನಾನು ಆ ವ್ಯಕ್ತಿಯ ಹೆಸರು ಕೇಳಿಲ್ಲ. ಅವರು ಯಾರು ಎಂದು ಗೊತ್ತಿಲ್ಲ. ಪದೇ ಪದೇ ಅವರ ಹೆಸರನ್ನ ನನ್ನ ಬಾಯಲ್ಲಿ ಏಕೆ ಹೇಳಿಸುತ್ತೀರಿ. ಅವರೇನು ಪ್ರಧಾನಿ ಮೋದಿನಾ, ಅಮಿತ್ ಶಾ ನಾ..? ಸಿಎಂ ಬಿಎಸ್ ಯಡಿಯೂರಪ್ಪ..? ಎಂದು ಕಿಡಿಕಾರಿದರು.mla-mp-renukacharya-outrage-mlc-cp-yogeshwar-minister-position

ಸಿಎಂ ಬಿಎಸ್ ವೈ ಹೇಳಿಕೆಯಿಂದ ನನ್ನ ಮನಸ್ಸಿಗೆ ಆಘಾತವಾಗಿದೆ.  ಶಾಸಕರು ಕ್ಷೇತ್ರಗಳಿಂದ ವಾಪಸ್ಸಾದ ಬಳಿಕ ಚರ್ಚಿಸುತ್ಥೇವೆ. ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಿಎಂ ಭೇಟಿ ಮಾಡಿ ಚರ್ಚಿಸುತ್ತೇವೆ. ನಮಗೆ ಪ್ರತ್ಯೇಕ ಸಭೆ ಮಾಡಿ ಎಂದು ಸಿಎಂ ಹೇಳಿಲ್ಲ. ಪ್ರತ್ಯೇಕ ಸಭೆ ಮಾಡಲು ಬಿಜೆಪಿಯಲ್ಲಿ ಅವಕಾಶವಿಲ್ಲ. ಪಕ್ಷದ ವೇದಿಕೆಯಲ್ಲೇ ಪ್ರಸ್ತಾಪಿಸಲು ನಾನು ಬದ್ಧನಿದ್ದೇನೆ ಎಂದು ರೇಣುಕಾಚಾರ್ಯ ತಿಳಿಸಿದರು.

Key words:  MLA-MP-Renukacharya-outrage-mlc-cp yogeshwar- minister position