ಟೆಕ್ ಸಮ್ಮಿಟ್ ಉದ್ಘಾಟನೆ: ಬೆಂಗಳೂರು ಹಾಡಿ ಹೊಗಳಿದ ಪ್ರಧಾನಿ ಮೋದಿ.

ಬೆಂಗಳೂರು,,ನವೆಂಬರ್,16,2022(www.justkannada.in):  ಬೆಂಗಳೂರು ತಂತ್ರಜ್ಞಾನದ ತವರು, ಇನೋವೇಟಿವ್ ಸಿಟಿ. ಬೆಂಗಳೂರಿನ ಭವಿಷ್ಯ ಇನ್ನಷ್ಟು ಉಜ್ವಲವಾಗಲಿದೆ ಎಂದು ಪ್ರಧಾನಿ ಮೋದಿ ನುಡಿದರು.

ಬೆಂಗಳೂರಿನಲ್ಲಿ ನಡೆಯುತ್ತಿರುವ ಟೆಕ್ ಸಮ್ಮಿಟ್ ಅನ್ನು ವರ್ಚುವಲ್ ಮೂಲಕ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ಬೆಂಗಳೂರಿನಲ್ಲಿ ಉತ್ಸಾಹಿ ಯುವಕರ ದಂಡೇ ಇದೆ. ಭಾರತ ತಂತ್ರಜ್ಞಾನದ ಬೆಳವಣಿಗೆ ಮೇಲೆ ಪರಿಣಾಮ ಬೀರಿದೆ. ಭಾರತದಲ್ಲಿ  ಸ್ಟಾರ್ಟ್ ಅಫ ಸಂಖ್ಯೆ ದ್ವಿಗುಣವಾಗಿದ್ದು,  81 ಸಾವಿರ ಅಧಿಕೃತ ಸ್ಟಾರ್ಟ್ ಅಪ್ ಗಳಿವೆ. ಭಾರತ  ತಂತ್ರಜ್ಞಾನಕ್ಕೆ ಮಾನವೀಯ ಸ್ಪರ್ಶ ನೀಡಿದೆ ಎಂದರು.

ಕೋವಿಡ್ ಸಮಯದಲ್ಲಿ ಹಲವು ದೇಶಗಳು ಸಂಕಷ್ಟಕ್ಕೆ ಸಿಲುಕಿದ್ದವು  ಜನರ ಬಳಿ ತಲುಪಬೇಕಾದ ಮಾಧ್ಯಮವೇ ಇರಲಿಲ್ಲ. ಆದರೆ ತಂತ್ರಜ್ಞಾನದಿಂದ ಹಳ್ಳಿ ಹಳ್ಳಿ ತಲುಪಿದ್ದೇವೆ ಎಂದು ಹೇಳಿದರು.

Key words: Inauguration – Tech Summit-PM Modi- praised -Bangalore