ಕೊರೋನಾ ಹೊಸತಳಿ ಭೀತಿ ಹಿನ್ನೆಲೆ: ಸದ್ಯ ಶಾಲಾ ಕಾಲೇಜು ಬಂದ್ ಮಾಡುವ ನಿರ್ಧಾರ ಇಲ್ಲ- ಸಚಿವ ಬಿಸಿ ನಾಗೇಶ್.

ಬೆಂಗಳೂರು,ನವೆಂಬರ್,29,2021(www.justkannada.in):  ಕೊರೋನಾ ಹೊಸ ತಳಿ  ಒಮಿಕ್ರಾನ್ ಭೀತಿ ಹಿನ್ನೆಲೆ ಸದ್ಯ ಶಾಲಾ-ಕಾಲೇಜು ಬಂದ್  ಮಾಡುವ ನಿರ್ಧಾರ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಶಿಕ್ಷಣ ಸಚಿವ ಬಿಸಿ ನಾಗೇಶ್,  ಕೊರೋನಾ ಹೊಸ ತಳಿ ಹಿನ್ನೆಲೆ ಪೋಷಕರು ಯಾವುದೇ ರೀತಿ ಆತಂಕ  ಪಡುವ ಅಗತ್ಯವಿಲ್ಲ. ಆರೋಗ್ಯ ಇಲಾಖೆ ಜತೆ ಶಿಕ್ಷಣ ಇಲಾಖೆ ನಿರಂತರ ಸಂಪರ್ಕದಲ್ಲಿದೆ.  ಸದ್ಯ ಶಾಲಾಕಾಲೇಜುಗಳಲ್ಲಿ ಕೊರೋನಾ ಗಂಭೀರವಾಗಿಲ್ಲ. ಕೇಂದ್ರ ಸರ್ಕಾರದ ಸಲಹೆ ಪಡೆದು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

Key words: corona-no decision –scholl-college-bandh- Minister- BC nagesh