ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಸುದ್ಧಿ : ಈ ಬಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ಧೇನು ಗೊತ್ತೆ..?

ಬೆಂಗಳೂರು,ನವೆಂಬರ್,29,2021(www.justkannada.in): ಕೊರೊನಾ ಹೊಸ ತಳಿ  ಒಮಿಕ್ರಾನ್ ಸೋಂಕಿನ ಭೀತಿಯಿಂದಾಗಿ ಲಾಕ್ ಡೌನ್ ಮತ್ತೆ ಮಾಡಲಾಗುತ್ತದೆ ಎನ್ನುವಂತ ಸುದ್ದಿ ಹಬ್ಬಿದೆ. ಈ ಬಗ್ಗೆ ಮಾತನಾಡಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಮತ್ತೆ ಲಾಕ್ ಡೌನ್ ಮಾಡುವ ಪ್ರಸ್ತಾವನೆ ಇಲ್ಲ. ಲಾಕ್ ಡೌನ್ ಬಗ್ಗೆ ವದಂತಿ ಹಬ್ಬಿಸಿದ್ರೇ.. ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಸುಧಾಕರ್,  ಲಾಕ್ ಡೌನ್ ಎಂದು ಜನರನ್ನು ತಪ್ಪು ದಾರಿಗೆ ಎಳೆಯಬಾರದು. ರಾಜ್ಯ ಸರ್ಕಾರ ಘೋಷಣೆ ಮಾಡೋವರೆಗೆ ಯಾವುದೇ ಲಾಕ್ ಡೌನ್ ಇಲ್ಲ. ಲಾಕ್ ಡೌನ್ ಬಗ್ಗೆ ವದಂತಿ ಹಬ್ಬಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ  ಎಂದರು.

ಒಮಿಕ್ರಾನ್ ವೈರಸ್ ಕುರಿತಂತೆ ಚರ್ಚಿಸಲು ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆಗೆ ನಾಳೆ ಸಭೆ ನಡೆಸಲಾಗುತ್ತಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ವಿವಿಧ ತಜ್ಞರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಭೆಗೆ ತಾಂತ್ರಿಕ ಸಲಹಾ ಸಮಿತಿಗೂ ಆಹ್ವಾನಿಸಲಾಗಿದೆ. ರಾಜ್ಯದಲ್ಲಿ ಒಮಿಕ್ರಾನ್ ವೈರಸ್ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಮತ್ತಷ್ಟು ಚರ್ಚೆ ನಡೆಸಲಾಗುತ್ತದೆ ಎಂದು ಸಚಿವ ಸುಧಾಕರ್ ತಿಳಿಸಿದರು.

Key words: Lockdown-news -again – state-Minister- Dr K Sudhakar

ENGLISH SUMMARY…

Rumours of lockdown in State: Health Minister Dr. K. Sudhakar clarifies
Bengaluru, November 29, 2021 (www.justkannada.in): Rumors are making rounds that a lockdown would be imposed across the state again, following the fear of the new COVID variant ‘Omicron.’ However the Health and Medical Education Minister Dr. K. Sudhakar today informed that there is no proposal of imposing lockdown and warned strict action against rumor mongers.
Addressing the media people in Bengaluru today, he said, “nobody should try to mislead the people by mentioning lockdown. There will be no lockdown till the State Government announces. Strict action will be initiated against rumor mongers.”
“A meeting with the officials concerned will be held tomorrow to discuss the Omicron virus. Various experts along with the health department officials will take part in the meeting. We have also invited the technical advisory committee members to take part in the meeting. Further discussions will be held about taking strict measures concerning this,” he added.
Keywords: Health Minister/ Dr. K. Sudhakar/ rumour mongers/ legal action