ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂದ ಬಿಜೆಪಿ ನಾಯಕರಿಗೆ ಡಿ.ಕೆ ಶಿವಕುಮಾರ್ ತಿರುಗೇಟು.

ಬೆಳಗಾವಿ,ನವೆಂಬರ್,29,2021(www.justkannada.in):  ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂದು ಟೀಕಿಸುತ್ತಿರುವ ಬಿಜೆಪಿ ನಾಯಕರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ತಿರುಗೇಟು ನೀಡಿದ್ದಾರೆ.

ಬೆಳಗಾವಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್, ಬಿಎಸ್ ಯಡಿಯೂರಪ್ಪ ಜನತಾದಳದ ಬೆಂಬಲ ಕೇಳುತ್ತಿದ್ದಾರೆ. ಸಿಎಂ ಬೊಮ್ಮಾಯಿ ಸಹ ಬೆಂಬಲ ಕೇಳುತ್ತಿದ್ದಾರೆಂಬ ಸುದ್ಧಿ.  ಅರುಣ್ ಸಿಂಗ್ ಜೆಡಿಎಸ್ ಬಗ್ಗೆ ಮಾತನಾಡಿದ್ರು. ಜೆಡಿಎಸ್ ಬಗ್ಗೆ ಹೇಳಿಕೆ ನೀಡಿದ ಬಳಿಕವೂ ಮಾಜಿ ಪ್ರಧಾನಿ ಮಾಜಿ ಸಿಎಂ ಜತೆ ಮಾತನಾಡುವೆ ಎಂದು ಬಿಎಸ್ ವೈ ಹೇಳಿದ್ದಾರೆ. ಹಾಗಾದ್ರೆ ಯಾರು ಮುಳುಗುತ್ತಿರುವ ಹಡಗು..? ಬಿಜೆಪಿ ಬಲಿಷ್ಠವಾಗಿದ್ದರೇ ಜೆಡಿಎಸ್ ಬೆಂಬಲ ಯಾಕೆ ಕೇಳಬೇಕು ಎಂದು ಟಾಂಗ್ ನೀಡಿದರು.

ಕೆಜಿಎಫ್ ಬಾಬು ಬಗ್ಗೆ ದಾಖಲೆ ಬಿಡುಗಡೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್ ದಾಖಲೆ ಬಿಡುಗಡೆ ಮಾಡಲಿ, ನಾನೇನು ಹೇಳಲಿ. ಅಭ್ಯರ್ಥಿಗಳಿಗೆ ಸಾವಿರಾರು ವ್ಯವಹಾರ ಇರುತ್ತದೆ ಎಂದರು.

Key words: kpcc president -DK Shivakumar – BJP leaders – Congress – sinking-ship