ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣ: ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಮತ್ತೆ ಸಿಐಡಿ ವಶಕ್ಕೆ.

ಬೆಂಗಳೂರು,ನವೆಂಬರ್,16,2022(www.justkannada.in): 545 ಪಿಎಸ್ ಐ ಹುದ್ದೆ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ರನ್ನ ಸಿಐಡಿ ಮತ್ತೆ ವಶಕ್ಕೆ ಪಡೆದಿದೆ.

4ನೇ ಬಾರಿಗೆ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ರನ್ನು ವಶಕ್ಕೆ ಪಡೆದು ಸಿಐಡಿ ವಿಚಾರಣೆ ನಡೆಸುತ್ತಿದೆ. ಸಿಐಡಿ ಕಾರ್ಲಟನ್ ಭವನ ಕಚೇರಿಯಲ್ಲಿ ಸಿಐಡಿ ಡಿವೈಎಸ್ ಪಿ ಅಂಜುಮಾನ ನೇತೃತ್ವದಲ್ಲಿ ಅಮೃತ್ ಪೌಲ್ ರನ್ನ ವಿಚಾರಣೆ ನಡೆಸಲಾಗುತ್ತಿದೆ.

Key words: PSI-Recruitment -Illegal Case-IPS officer- Amrit Paul – again – CID custody.