Monday, October 12, 2026

Dasara Wishes

BJP DasraWishes_JK DasraWishes JK
Happy Dasara
Home Crime ಐಎಂಎ ಬಹುಕೋಟಿ ವಂಚನೆ ಕೇಸ್: ಮನ್ಸೂರ್ ಖಾನ್ 14 ದಿನಗಳ ಕಾಲ ಎಸ್ ಐಟಿ ವಶಕ್ಕೆ…

ಐಎಂಎ ಬಹುಕೋಟಿ ವಂಚನೆ ಕೇಸ್: ಮನ್ಸೂರ್ ಖಾನ್ 14 ದಿನಗಳ ಕಾಲ ಎಸ್ ಐಟಿ ವಶಕ್ಕೆ…

ಬೆಂಗಳೂರು,ಆ,3,2019(www.justkannada.in): ಹೂಡಿಕೆದಾರರಿಗೆ ಐಎಂಎ ಕಂಪನಿಯಿಂದ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಂಎ ಮಾಲೀಕ ಮನ್ಸೂರ್ ಖಾನ್ ನನ್ನ 14 ದಿನಗಳ ಕಾಲ ಎಸ್ ಐಟಿ ವಶಕ್ಕೆ ನೀಡಿ ಸಿಟಿ ಸಿವಿಲ್ ಕೋರ್ಟ್ ಆದೇಶಿಸಿದೆ.

ಇತ್ತೀಚೆಗಷ್ಟೇ ಮನ್ಸೂರ್ ಖಾನ್ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಮೊನ್ನೆಯಷ್ಟೆ ಮನ್ಸೂರ್  ಖಾನ್ ನನ್ನ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ನಡುವೆ ತಮ್ಮ ವಶಕ್ಕೆ ನೀಡುವಂತೆ ಎಸ್ ಐಟಿ ಕೋರ್ಟ್ ಗೆ ಮನವಿ ಮಾಡಿತ್ತು.

ಎಸ್ ಐಟಿ ಮನವಿ ಪುರಸ್ಕರಿಸಿದ  1ನೇ ಸಿಸಿಹೆಚ್ ನ್ಯಾಯಾಧೀಶರಾದ ಶಿವಶಂಕರ ಅಮರಣ್ಣ  ಅವರು ಮನ್ಸೂರ್ ಖಾನ್ ನನ್ನ 14 ದಿನಗಳ ಕಾಲ ಎಸ್ ಐಟಿ ವಶಕ್ಕೆ ನೀಡಿ ಆದೇಶಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆಗಸ್ಟ್ 16ರವರೆಗೆ ಮನ್ಸೂರ್ ಖಾನ್ ಎಸ್ ಐಟಿ ವಶದಲ್ಲಿರಲಿದ್ದು ಎಸ್ ಐಟಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.

Key words:  IMA – Fraud Case-  Mansoor Khan -detained -SIT – 14 days