Tuesday, September 22, 2026

BDA Apartments

Home Front Page ಡಾ.ಕೆ. ಸುಧಾಕರ್ ಕಣಕ್ಕಿಳಿದ್ರೆ ಎದುರಾಳಿಯಾಗಲು ನಾನು ರೆಡಿ- ಶಾಸಕ ಪ್ರದೀಪ್ ಈಶ್ವರ್.

ಡಾ.ಕೆ. ಸುಧಾಕರ್ ಕಣಕ್ಕಿಳಿದ್ರೆ ಎದುರಾಳಿಯಾಗಲು ನಾನು ರೆಡಿ- ಶಾಸಕ ಪ್ರದೀಪ್ ಈಶ್ವರ್.

ಚಿಕ್ಕಬಳ್ಳಾಪುರ, ಜನವರಿ 11,2024(www.justkannada.in): ಚಿಕ್ಕಬಳ್ಳಾಪುರ ಲೋಕಸಭೆ ಚುನಾವಣೆಯಲ್ಲಿ ಮಾಜಿ ಸಚಿವ ಡಾ.ಕೆ.ಸುಧಾಕರ್ ಸ್ಪರ್ಧೆಗಿಳಿದರೇ ನಾನು ಎದುರಾಳಿಯಾಗಲು ಸಿದ್ದನಿದ್ದೇನೆ. ನನಗೆ ಟಿಕೆಟ್ ನೀಡಿ ಎಂದು ಹೈಕಮಾಂಡ್ ಗೆ ಮನವಿ ಮಾಡುತ್ತೇನೆ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್,  ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಡಾ.ಕೆ.ಸುಧಾಕರ್  ಕಣಕ್ಕಿಳಿದರೇ ಡಾ.ಕೆ.ಸುಧಾಕರ್ ವಿರುದ್ಧ ಸ್ಪರ್ಧೆಗಿಳಿಯಲು ಕಾಂಗ್ರೆಸ್ ಪಕ್ಷಕ್ಕೆ ಮನವಿ ಮಾಡಿ ನಾನೇ ನಿಲ್ಲುತ್ತೇನೆ ಮತ್ತು ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಡಾ.ಕೆ. ಸುಧಾಕರ್ ಕಣಕ್ಕಿಳಿದ್ರೆ ಎದುರಾಳಿಯಾಗಲು ನಾನು ರೆಡಿ pradeep Eshwar-sudhakar pradeep Eshwar s...

ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ವಿಧಾನ ಪರಿಷತ್ ಸದಸ್ಯ ರವಿ, ಬಾಲಾಜಿ ಮೊದಲಾದವರ ಹೆಸರುಗಳು ತೇಲಾಡುತ್ತಿವೆ. ಹೈಕಮಾಂಡ್ ಯಾರಿಗೆ ಟಿಕೆಟ್‌ ನೀಡಿದರೂ ಸಹ ಅವರ ಗೆಲುವಿಗಾಗಿ ಶ್ರಮಿಸುತ್ತೇವೆ. ತನಗೆ ಮತ್ತು ಕಾಂಗ್ರೆಸ್ ಕಾರ್ಯಕರ್ತರಿಗೆ ಪಕ್ಷನಿಷ್ಠೆ ಮುಖ್ಯ, ವರಿಷ್ಠರ ಅಣತಿಯನ್ನು ಪಾಲಿಸುತ್ತೇವೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.

Key words: If- Sudhakar- contests – Lok Sabha elections- I am- ready – MLA Pradeep Eshwar.