Wednesday, August 5, 2026

BDA Apartments

Home Front Page ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌: ನಂ.1 ಸ್ಥಾನ ಕಳೆದುಕೊಂಡ ಕಿಂಗ್ ಕೊಯ್ಲಿ

ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌: ನಂ.1 ಸ್ಥಾನ ಕಳೆದುಕೊಂಡ ಕಿಂಗ್ ಕೊಯ್ಲಿ

ದುಬೈ, ಫೆಬ್ರವರಿ 27, 2020 (www.justkannada.in): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಿಂದ ಕೆಳಗಿಳಿದಿದ್ದಾರೆ.

ನ್ಯೂಜಿಲೆಂಡ್ ಎದುರು ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಅವರು ಕೇವಲ 21 ರನ್‌ ಗಳಿಸಿದ್ದರು. ಭಾರತ ತಂಡವೂ ಸೋತಿತ್ತು. ಕೊಹ್ಲಿ ಖಾತೆಯಲ್ಲಿ 906 ಪಾಯಿಂಟ್‌ಗಳಿವೆ.

ಅವರು ಇದೀಗ ಎರಡನೇ ಸ್ಥಾನಕ್ಕೆ ಜಾರಿದ್ದಾರೆ. ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಅಗ್ರಸ್ಥಾನಕ್ಕೇರಿದ್ದಾರೆ. ಅಜಿಂಕ್ಯ ರಹಾನೆ, ಚೇತೇಶ್ವರ್ ಪೂಜಾರ ಮತ್ತು ಮಯಂಕ್ ಅಗರವಾಲ್ ಅವರು ಕ್ರಮವಾಗಿ 8, 9 ಮತ್ತು 10ನೇ ಸ್ಥಾನದಲ್ಲಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಭಾರತದ ಸ್ಪಿನ್ನರ್ ಆರ್. ಅಶ್ವಿನ್ ಒಂಬತ್ತನೇ ಸ್ಥಾನಕ್ಕಿಳಿದಿದ್ದಾರೆ. ಅವರು ಈ ಮೊದಲು ಎಂಟರಲ್ಲಿದ್ದರು.