ಐಸಿಸಿ ಟೆಸ್ಟ್ ಶ್ರೇಯಾಂಕ: ಟಾಪ್ ಟೆನ್’ನಿಂದ ಹೊರಬಿದ್ದ ‘ಕಿಂಗ್’ ಕೊಯ್ಲಿ

ಬೆಂಗಳೂರು, ಜುಲೈ 07, 2022 (www.justkannada.in): ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ವಿರಾಟ್ ಕೊಹ್ಲಿ ಮೂರು ಸ್ಥಾನಗಳನ್ನು ಕಳೆದುಕೊಂಡಿದ್ದಾರೆ.

ಕೊಹ್ಲಿ ಕಳಪೆ ಪ್ರದರ್ಶನದಿಂದಾಗಿ ಟಾಪ್-10 ನಿಂದ ಹೊರಬಿದ್ದಿದ್ದಾರೆ. 6 ವರ್ಷಗಳಲ್ಲಿ ವಿರಾಟ್ ಟಾಪ್ 10 ನಿಂದ ಹೊರಗುಳಿದಿರುವುದು ಇದೇ ಮೊದಲು ಭಾರಿಯಾಗಿದೆ.

ಐದನೇ ಟೆಸ್ಟ್‌ನಲ್ಲಿ ಶತಕ ಮತ್ತು ಅರ್ಧಶತಕ ಸಿಡಿಸಿದ ಟೀಂ ಇಂಡಿಯಾದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಬ್ ಪಂತ್ ಮೊದಲ ಬಾರಿಗೆ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಐದನೇ ಸ್ಥಾನಕ್ಕೆ ತಲುಪಿದ್ದಾರೆ.

ಪಂತ್ ಕೊನೆಯ ಆರು ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ಎರಡು ಶತಕ ಮತ್ತು ಮೂರು ಅರ್ಧ ಶತಕಗಳೊಂದಿಗೆ ಇತ್ತೀಚಿನ ಫಾರ್ಮ್ ನಲ್ಲಿ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅತ್ಯುನ್ನತ ಸ್ಥಾನಕ್ಕೆ ಏರಿದ್ದಾರೆ.

ವಿರಾಟ್ ಕೊಹ್ಲಿ, ಮರು ನಿಗದಿತ ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಕೇವಲ 11 ಮತ್ತು 20 ರನ್ ಗಳಿಸಿದರು ಮತ್ತು ಐಸಿಸಿ ಪುರುಷರ ಟೆಸ್ಟ್ ಆಟಗಾರರ ಶ್ರೇಯಾಂಕದಲ್ಲಿ ಟಾಪ್-10 ರಿಂದ ಹೊರಬಿದ್ದರು.