ವಿಂಬಲ್ಡನ್ : ಮಿಶ್ರ ಡಬಲ್ಸ್ ಸೆಮಿಫೈನಲ್ ನಲ್ಲಿ ಸಾನಿಯಾ ಮಿರ್ಜಾ-ಮೇಟ್ ಪಾವಿಕ್ ಜೋಡಿಗೆ ಸೋಲು

ನವದೆಹಲಿ,ಜುಲೈ,7,2022(www.justkannada.in): ವಿಂಬಲ್ಡನ್  ಮಿಶ್ರ ಡಬಲ್ಸ್ ಸೆಮಿಫೈನಲ್ ನಲ್ಲಿ ಸಾನಿಯಾ ಮಿರ್ಜಾ ಮತ್ತು ಕ್ರೊವೇಷಿಯಾದ ಮೇಟ್ ಪಾವಿಕ್ ಜೋಡಿ ಸೋಲು ಅನುಭವಿಸಿದೆ.

ಸಾನಿಯಾ ಮಿರ್ಜಾ ಮತ್ತು ಕ್ರೊವೇಷಿಯಾದ ಮೇಟ್ ಪಾವಿಕ್ ಜೋಡಿ 6-4,5-7,4-6 ಸೆಟ್ ಗಳಿಂದ ಹಾಲಿ ಚಾಂಪಿಯನ್ ನೀಲ್ ಸ್ಕುಪಿಸ್ಕಿ ಮತ್ತು ಡಿಸೈರಿ ಕ್ರಾವೆಸ್ಕಿ ಜೋಡಿ ವಿರುದ್ಧ ಆಘಾತ ಅನುಭವಿಸಿದರು.

ವರ್ಷದ ಆರಂಭದಲ್ಲಿ ವೃತ್ತಿಪರ ಟೆನಿಸ್ ಗೆ ವಿದಾಯ ಘೋಷಿಸಿದ್ದ ಸಾನಿಯಾ ಮಿರ್ಜಾ ಈ ವರ್ಷ ಕೊನೆಯ ಬಾರಿ ಆಡಲಿದ್ದೇನೆ ಎಂದಿದ್ದರು.

ವಿಂಬಲ್ಡನ್ ಫೈನಲ್ ಪ್ರವೇಶಿಸಲು ಸಾನಿಯಾ ಜೋಡಿ ಇನ್ನಿಲ್ಲದ ಹೋರಾಟ ನಡೆಸಿದರು. ಆದರೆ ಚಾಂಪಿಯನ್ ಜೋಡಿ ವಿರೋಚಿತ ಸೋಲುಂಡು ಟೂರ್ನಿಯಿಂದ ಹೊರಬಿದ್ದರು.