ಸಿದ್ಧರಾಮೋತ್ಸವದಿಂದ ಡಿಕೆಶಿಗೆ ಭಯ, ನಿದ್ದೆ ಬರುತ್ತಿಲ್ಲ-ನಳೀನ್ ಕುಮಾರ್ ಕಟೀಲ್  ವ್ಯಂಗ್ಯ.

ಬೆಂಗಳೂರು,ಜುಲೈ,7,2022(www.justkannada.in):  ಸಿದ್ಧರಾಮೋತ್ಸವದಿಂದ ನಮಗೆ ಹೊಟ್ಟೆ ಕಿಚ್ಚಿಲ್ಲ. ಸಿದ್ದರಾಮಯ್ಯ ಇನ್ನಷ್ಟು ಇಂತಹ ಕಾರ್ಯಕ್ರಮ ಮಾಡಲಿ. ಆದರೆ ಸಿದ್ಧರಾಮೋತ್ಸವದಿಂದ ಡಿಕೆ ಶಿವಕುಮಾರ್ ಗೆ ಭಯ ಶುರುವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.

ಇಂದು ಮಾಧ್ಯಮಗಳ ಜತೆ ಮಾತನಾಡಿದ ನಳೀನ್ ಕುಮಾರ್ ಕಟೀಲ್,  ಕಾರ್ಯಕ್ರಮ ಶುರುವಾದಾಗಿನಿಂದ ಡಿಕೆ ಶಿವಕುಮಾರ್ ಗೆ ನಿದ್ದೆ ಬರುತ್ತಿಲ್ಲ. ಮುಂದಿನ ಸಿಎಂ ಎಂದು ತೋರಿಸಿಕೊಳ್ಳಲು ಸಿದ್ಧರಾಮಯ್ಯ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಸಿದ್ಧರಾಮಯ್ಯ ತನ್ನ ಜೊತೆಗಿದ್ದವರನ್ನ ಈಗಾಗಲೇ ಮುಗಿಸಿದ್ದಾರೆ. ಖರ್ಗೆ ಪರಮೇಶ್ವರ್ ದೂರವಿಟ್ರು. ಈಗ ರಾಜಕೀಯವಾಗಿ ಡಿಕೆಶಿ ಮುಗಿಸಲು ತಂತ್ರ ಹೆಣೆದಿದ್ದಾರೆ ಎಂದು ಕುಟುಕಿದರು.

ಡ್ರಗ್ಸ್ ದಂಧೆಯಿಂದ ಕಾಂಗ್ರೆಸ್ ಸರ್ಕಾರ ಬದುಕಿತ್ತು. ಆದರೆ ಡ್ರಗ್ಸ್ ದಂಧೆಗೆ ಕಡಿವಾಣ ಹಾಕಿದ್ದು ಬಿಜೆಪಿ ಸರ್ಕಾರ. ಸಿದ್ಧರಾಮಯ್ಯ ಈಗ ಸಿಎಂ ರಾಜೀನಾಮೆ ಕೇಳುತ್ತಿದ್ದಾರೆ. ಅಂದು ಸಿದ್ಧರಾಮಯ್ಯನೇ ರಾಜೀನಾಮೆ ನೀಡಬೇಕಿತ್ತು ಎಂದು ಕಟೀಲ್ ಟೀಕಿಸಿದರು.

Key words: DK Shivakumar – scared – Siddaramotsava-Naleen Kumar Kateel

ENGLISH SUMMARY…

D.K. Shivakumar scared from Siddaramotsava: Nalin Kumar Kateel ridicules
Bengaluru, July 7, 2022 (www.justkannada.in): “I am not jealous about the organizing of Siddaramotsava. Let him do more such programs. However, I feel D.K. Shivakumar is afraid of it,” observed BJP State President Nalin Kumar Kateel.
Speaking to the media persons today, he expressed his view that D.K. Shivakumar appears to have lost his sleep since the beginning of the Siddaramotsava. “Siddaramaiah has stepped forward to show his strength in order to project himself as the next Chief Minister. Siddaramaiah has already buried others who were with him. He was the one who distanced Parameshwar and Kharge. Now he is all set to finish D.K. Shivakumar,” he said.
“The Congress government used to survive from the drug dealing. However, the BJP government has put a full stop to it now. That is why Siddaramaiah is demanding Chief Minister Basavaraj Bommai’s resignation. But Siddaramaiah should have resigned then,” Kateel criticized.
Keywords: BJP State President/ Nalin Kumar Kateel/ Siddaramotsava