‘ಟೈಗರ್ ಟಾಕೀಸ್’ ಚಿತ್ರ ನಿರ್ಮಾಣ ಸಂಸ್ಥೆ ಆರಂಭಿಸಿದ ವಿನೋದ್ ಪ್ರಭಾಕರ್

ಬೆಂಗಳೂರು, ಜುಲೈ 07, 2022 (www.justkannada.in): ನಟ ವಿನೋದ್ ಪ್ರಭಾಕರ್ ಅವರು ತಮ್ಮ ತಂದೆಯ ಹೆಸರಿನಲ್ಲಿ ಚಿತ್ರ ನಿರ್ಮಾಣ ಸಂಸ್ಥೆ ಆರಂಭಿಸುತ್ತಿದ್ದಾರೆ.

ಸಂಸ್ಥೆಗೆ ‘ಟೈಗರ್ ಟಾಕೀಸ್’ ಎಂಬ ಹೆಸರಿಡಲಾಗಿದ್ದು, ಆ ಸಂಸ್ಥೆ ಮುಖಾಂತರ ಲಂಕಾಸುರ ಎನ್ನುವ ಸಿನಿಮಾ ನಿರ್ಮಾಣ ಮಾಡಲಾಗಿದೆ.

ಚಿತ್ರ ನಿರ್ಮಾಣ ಸಂಸ್ಥೆ ಆರಂಭಿಸುವ ಮೂಲಕ ಟೈಗರ್ ಪ್ರಭಾಕರ್ ಹೆಸರನ್ನು ಶಾಶ್ವತವಾಗಿಡಲು ಪ್ರಯತ್ನ ನಡೆಸಿದ್ದಾರೆ ವಿನೋದ್ ಪ್ರಭಾಕರ್.

ಸಂಸ್ಥೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅಧಿಕೃತವಾಗಿ ಚಾಲನೆ ನೀಡಿ ವಿನೋದ್ ಪ್ರಭಾಕರ್ ಗೆ ಶುಭ ಹಾರೈಸಿದ್ದಾರೆ.

ಈ ಮೂಲಕ ಕನ್ನಡ ಸಿನಿಮಾ ರಂಗದ ಎವರ್ ಗ್ರೀನ್ ನಟ ಟೈಗರ್ ಪ್ರಭಾಕರ್ ಹೆಸರನ್ನು ಜನ ಮಾನಸದಲ್ಲಿ ಉಳಿಸುವ ಯತ್ನಕ್ಕೆ ವಿನೋದ್ ಕೈಹಾಕಿದ್ದಾರೆ.