“ಜನ ಗಣ ಮನ”ದಲ್ಲಿ ಮತ್ತೆ ಒಂದಾಗಲಿದ್ದಾರೆ ವಿಜಯ್ ದೇವರಕೊಂಡ-ರಶ್ಮಿಕಾ

ಬೆಂಗಳೂರು, ಜುಲೈ 07, 2022 (www.justkannada.in): ಟಾಲಿವುಡ್ ಸೆನ್ಸೇಶನ್ ಜೋಡಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರು  “ಜನ ಗಣ ಮನ” ಚಿತ್ರದ ಒಂದು ವಿಶೇಷ ಹಾಡೊಂದ್ರಲ್ಲಿ ಒಟ್ಟಿಗೆ ನಟಿಸಲಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ.

ಈ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ಹೊರ ಬಂದಿಲ್ಲ.ಆದರೆ ಈ ವಿಷಯ ಟಾಲಿವುಡ್ ನಗರಿಯಲ್ಲಿ ಸಖತ್ ಸದ್ದು ಮಾಡುತ್ತಿದೆ. ಪುರಿ ಜಗನ್ನಾಥ್ ಈ ಚಿತ್ರಕ್ಕೆ ಡೈರೆಕ್ಷನ್ ಹೇಳುತ್ತಿದ್ದಾರೆ.

ಚಿತ್ರದಲ್ಲಿ ವಿಜಯ್ ದೇವರಕೊಂಡಗೆ ನಾಯಕಿಯಾಗಿ ನಟಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. 2023ರ ಆಗಸ್ಟ್’ನಲ್ಲಿ ಜನ ಗಣ ಮನ ತೆರೆಕಾಣಲಿದೆ.

ಟಾಲಿವುಡ್‌ನಲ್ಲಿ ಒಂದು ಟೈಮ್‌ನಲ್ಲಿ ಸಿಕ್ಕಾಪಟ್ಟೆ ಸೆನ್ಸೇಶನ್ ಕ್ರಿಯೇಟ್ ಮಾಡಿದ ಜೋಡಿ ಕುರಿತ ಈ ಸುದ್ದಿ ಮತ್ತೆ ಸದ್ದು ಮಾಡುತ್ತಿದೆ.