Thursday, September 17, 2026

BDA Apartments

ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್: ಹೀಗಿದೆ ನೋಡಿ ಟೀಂ ಇಂಡಿಯಾ ಜೆರ್ಸಿ ! BDA JK_Adv B...
Home Front Page ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್: ಹೀಗಿದೆ ನೋಡಿ ಟೀಂ ಇಂಡಿಯಾ ಜೆರ್ಸಿ !

ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್: ಹೀಗಿದೆ ನೋಡಿ ಟೀಂ ಇಂಡಿಯಾ ಜೆರ್ಸಿ !

ಬೆಂಗಳೂರು, ಸೆಪ್ಟೆಂಬರ್ 25, 2023 (www.justkannada.in): ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಗೆ ಭಾರತ ತಂಡದ ಜೆರ್ಸಿ ಸೇರಿದಂತೆ ಕಿಟ್‌ ಅನ್ನು ಅನಾವರಣಗೊಂಡಿದೆ.

ಈ ಬಾರಿ ಭಾರತ ತಂಡದ ಆಟಗಾರರು ಅಡಿಡಾಸ್‌ ಸಂಸ್ಥೆಯ ಜೆರ್ಸಿಯಲ್ಲಿ ಕಂಗೊಳಿಸಲಿದ್ದು, ತಂಡದ ಜೆರ್ಸಿ ಸೇರಿದಂತೆ ಪ್ರಾಕ್ಟೀಸ್ ಕಿಟ್‌ ಅಡಿಡಾಸ್‌  ಅಧಿಕೃತವಾಗಿ ಅನಾವರಣಗೊಳಿಸಿದೆ.

ವಿಶ್ವ ಕ್ರಿಕೆಟ್‌ನಲ್ಲಿಯೇ ಬಿಸಿಸಿಐ ಹಾಗೂ ಅಡಿಡಾಸ್‌ ನಡುವಿನ ಒಪ್ಪಂದ ಅತ್ಯಂತ ದೊಡ್ಡದು ಎನ್ನಲಾಗಿದೆ. ಆದರೆ, ಬಿಸಿಸಿಐ ಹಾಗೂ ಅಡಿಡಾಸ್‌ ಐದು ವರ್ಷಗಳ ಅವಧಿಗೆ ಒಪ್ಪಂದವನ್ನು ಮಾಡಿಕೊಂಡಿವೆ.

ಕಳೆದ ಸೀಮಿತ ಓವರ್‌ಗಳ ಸರಣಿಯಲ್ಲಿ ಭಾರತ ತಂಡದ ಆಟಗಾರರಿಗೆ ನೀಡಿದ್ದ ಅದೇ ಜೆರ್ಸಿಯಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಏಕದಿನ ವಿಶ್ವಕಪ್‌ಗೆ ನೀಡಲಾಗುತ್ತಿದೆ.

ಹಳೆಯ ಜೆರ್ಸಿಯಲ್ಲಿ ಭುಜದ ಮೇಲೆ ಬಿಳಿ ಬಣ್ಣದ ಗೆರೆಗಳು ಕಾಣಿಸಿಕೊಂಡಿದ್ದವು. ಆದರೆ, ಏಕದಿನ ವಿಶ್ವಕಪ್‌ ಜೆರ್ಸಿಯಲ್ಲಿ ಭುಜದ ಮೇಲೆ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣದ ಗೆರೆಗಳನ್ನು ನೀಡಲಾಗಿದೆ.