ಕಾವೇರಿ ವಿವಾದ : ರಾಜ್ಯ ಬಿಜೆಪಿ ನಾಯಕರು ಮೋದಿಗೆ ಮನವರಿಕೆ ಮಾಡಿಕೊಡಬೇಕಿತ್ತು- ಸಚಿವ ರಾಮಲಿಂಗಾರೆಡ್ಡಿ.

ರಾಮನಗರ,ಸೆಪ್ಟಂಬರ್,25,2023(www.justkannada.in):  ಕಾವೇರಿ ನದಿ ನೀರು ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ನಾಯಕರು ಪ್ರ‍ಧಾನಿ ಮೋದಿಗೆ ಮನವರಿಕೆ ಮಾಡಿಕೊಡಬೇಕಿತ್ತು ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ರಾಮನಗರದಲ್ಲಿ ಇಂದು ಮಾತನಾಡಿದ ಸಚಿವ ರಾಮಲಿಂಗರೆಡ್ಡಿ,  ಭಾಷೆ, ಜಲದ ವಿಚಾರದಲ್ಲಿ ಅನ್ಯಾಯವಾದಾಗ ಪ್ರತಿಭಟನೆಗಳು ಸಹಜ. ಹೋರಾಟಗಾರರಿಗೆ ನಮ್ಮಿಂದ ಯಾವುದೇ ಧಕ್ಕೆ ಉಂಟಾಗುವುದಿಲ್ಲ ಎಂದು ತಿಳಿಸಿದರು.

ಕಳೆದ ವರ್ಷ ತಮಿಳುನಾಡಿಗೆ 660 ಟಿಎಂಸಿ ನೀರು ಹರಿಸಲಾಗಿದೆ. ಆದರೆ ಈ ಬಾರಿ ರಾಜ್ಯದಲ್ಲಿ ಸರಿಯಾಗಿ ಮಳೆಯಾಗಿಲ್ಲ, ಮಾನಿಟರಿಂಗ್ ವಿಂಗ್​ಗೆ ಎಲ್ಲವೂ ಗೊತ್ತಿದೆ‌. ‘ಸುಪ್ರೀಂ’ಗೂ ನೀರಿಲ್ಲದಿರುವ ಬಗ್ಗೆ ಮಾಹಿತಿ ಇದ್ದರೂ ಸ್ಟೇ ನೀಡಿಲ್ಲ. ಪ್ರಧಾನಿ ಮೋದಿಗೆ ಮಾಹಿತಿ ಇದ್ದರೂ ಮಧ್ಯಪ್ರವೇಶ ಮಾಡುತ್ತಿಲ್ಲ. ರಾಜ್ಯ ಬಿಜೆಪಿ ನಾಯಕರು ಮೋದಿಗೆ ಮನವರಿಕೆ ಮಾಡಿಕೊಡಬೇಕಿತ್ತು. ಆದರೆ ಬಿಜೆಪಿಯವರು ಆರೋಪ ಮಾಡುವುದಲ್ಲೇ ತಲ್ಲೀನರಾಗಿದ್ದಾರೆ. ಯಾವುದೇ ವರ್ಗಕ್ಕೆ ಮೋಸ ಮಾಡುವ ಉದ್ದೇಶ ಕಾಂಗ್ರೆಸ್​ ಗೆ ಇಲ್ಲ. ನಾವು ನೀಡಿರುವ ಎಲ್ಲ ಭರವಸೆ ಈಡೇರಿಸಿದ್ದೇವೆ. ಮೋಸ ಮಾಡುವುದು ಬಿಜೆಪಿಯವರ ರಕ್ತದಲ್ಲಿಯೇ ಇದೆ ಎಂದು ಕಿಡಿಕಾರಿದರು.

Key words: Cauvery-dispute-BJP leaders – convince- Modi-Minister -Ramalingareddy.