Thursday, September 17, 2026

BDA Apartments

ಮತ್ತೊಂದು ಸೌತ್ ಸಿನಿಮಾಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಐಶ್ವರ್ಯ ರೈ BDA JK_Adv BDA Adv
Home Cinema ಮತ್ತೊಂದು ಸೌತ್ ಸಿನಿಮಾಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಐಶ್ವರ್ಯ ರೈ

ಮತ್ತೊಂದು ಸೌತ್ ಸಿನಿಮಾಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಐಶ್ವರ್ಯ ರೈ

ಬೆಂಗಳೂರು, ಸೆಪ್ಟೆಂಬರ್ 25, 2023 (www.justkannada.in): ನಟ ಚಿರಂಜೀವಿ ನಟಿಸಲಿರುವ ಹೊಸ ಚಿತ್ರಕ್ಕೆ ಐಶ್ವರ್ಯ ರೈ ನಾಯಕಿಯಾಗಿ ನಟಿಸಲು ಒಪ್ಪಿಕೊಂಡಿದ್ದಾರೆ.

ಹೌದು. ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್ 2’ ಚಿತ್ರದಲ್ಲಿ ನಟಿಸಿ ಗಮನ ಸೆಳೆದಿದ್ದ ಐಶ್ವರ್ಯ ರೈ ಅವರು ಮತ್ತೊಂದು ಸೌತ್ ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಸಿನಿಮಾಗಳ ಆಯ್ಕೆಯ ವಿಷಯದಲ್ಲಿ ನಾನು ತುಂಬಾ ಚ್ಯೂಸಿಯಾಗಿದ್ದೇನೆ ಎಂದಿದ್ದ ಐಶ್ವರ್ಯ, ಇತ್ತೀಚಿನ ವರ್ಷಗಳಲ್ಲಿ ಹೆಚ್ಚೆಚ್ಚು ದಕ್ಷಿಣ ಭಾರತದ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈ ಮೂಲಕ ದಕ್ಷಿಣ ಭಾರತದ ಸಿನಿಮಾಗಳ ಘನತೆಯನ್ನು ಎತ್ತಿ ಹಿಡಿಯುತ್ತಿದ್ದಾರೆ.

ಐಶ್ವರ್ಯ ರೈ ಈ ಹಿಂದೆ ತಮಿಳು ಚಿತ್ರಕ್ಕೆ ಸಹಿ ಮಾಡಿದ್ದಾರೆ. ಅಜಿತ್ ಕುಮಾರ್ ಆ ಸಿನಿಮಾದ ನಾಯಕ ಎನ್ನಲಾಗಿತ್ತು. ಇದರ ಬೆನ್ನಲ್ಲೇ ಚಿರಂಜೀವಿ ಅವರ ಸಿನಿಮಾದಲ್ಲಿ ಐಶ್ವರ್ಯ ರೈ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ.