ರಾಜೀನಾಮೆ ನೀಡುವಂತೆ ನನಗೂ ಭಾರಿ ಒತ್ತಡ ಬರುತ್ತಿದೆ- ಸ್ಪೋಟಕ ಮಾಹಿತಿ ನೀಡಿದ ಕಾಂಗ್ರೆಸ್ ಶಾಸಕ…

ದಕ್ಷಿಣ ಕನ್ನಡ,ಜು,10,2019(www.justkannada.in): ರಾಜೀನಾಮೆ ನೀಡುವಂತೆ ನನಗೂ ಭಾರಿ ಒತ್ತಡ ಬರುತ್ತಿದೆ. ಆಸೆ ಆಮಿಷಗಳನ್ನ ಒಡ್ಡುತ್ತಿದ್ದಾರೆ ಎಂದು ಶೃಂಗೇರಿ ಕಾಂಗ್ರೆಸ್ ಶಾಸಕ ರಾಜೇಗೌಡ ಸ್ಪೋಟಕ ಮಾಹಿತಿ ನೀಡಿದ್ದಾರೆ.

ದಕ್ಷಿಣಕನ್ನಡ ಬೆಳ್ತಂಗಡಿಯಲ್ಲಿ ಇಂದು ಮಾತನಾಡಿದ ಕಾಂಗ್ರೆಸ್ ಶಾಸಕ ರಾಜೇಗೌಡ, ಬೆಳಿಗ್ಗೆಯಿಂದಲೂ ರಾಜೀನಾಮೆ ನೀಡುವಂತೆ ನನಗೆ ಒತ್ತಡ ಬರುತ್ತಿದೆ. ಆಸೆ ಆಮಿಷಗಳನ್ನ ಒಡ್ಡುತ್ತಿದ್ದಾರೆ. ಆದ್ರೆ ನಾನು ಪಕ್ಷ ಬಿಡಲ್ಲ. ಯಾರೋ ಅಮಿಷಕ್ಕೂ ಒಳಗಾಗಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಮೈತ್ರಿ ಸರ್ಕಾರದ ಶಾಸಕರು ಈಗಾಗಲೇ 13 ಮಂದಿ ಶಾಸಕರು ರಾಜೀನಾಮೆ ನೀಡಿ ಮುಂಬೈಗೆ ತೆರಳಿದ್ದು, ಅತೃಪ್ತ ಶಾಸಕರನ್ನ ಮನವೊಲಿಸಲು ಸಚಿವ ಡಿ.ಕೆ ಶಿವಕುಮಾರ್ ಮುಂಬೈ ಹೋಟೆಲ್ ಮುಂದೆಯೇ ಕಾದು ಕುಳಿತಿದ್ದಾರೆ. ಇನ್ನು ಬಿಜೆಪಿಯವರು ರಾಜ್ಯಪಾಲರ ಭೇಟಿಗೆ ತೆರಳಿದ್ದಾರೆ. ಈ ಮಧ್ಯೆ ಬಿಜೆಪಿ ಅಪರೇಷನ್ ಕಮಲದ  ವಿರುದ್ದ ಕಾಂಗ್ರೆಸ್ –ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

Key words: I am -under -heavy pressure – resign –congress -MLA