ಬೆಂಗಳೂರಿನಲ್ಲಿ ಕಟ್ಟಡ ಕುಸಿದು ಓರ್ವ ಸಾವು: ಅವಶೇಷಗಳಡಿ ಸಿಲುಕಿದ  ಐದು ಮಂದಿ ರಕ್ಷಣೆ

ಬೆಂಗಳೂರು, ಜು.10,2019(www.justkannada.in):  ಬಹುಮಹಡಿ ಕಟ್ಟಡದ ಬೇಸಮೆಂಟ್ ಕುಸಿದ ಪರಿಣಾಮ ಓರ್ವ ಸಾವನ್ನಪ್ಪಿ ಹಲವು ಮಂದಿ ಕಟ್ಟಡದ ಅವಶೇಷಗಳಡಿ ಸಿಲುಕಿರುವ ಘಟನೆ  ಬೆಂಗಳೂರಿನಲ್ಲಿ ನಡೆದಿದೆ.

ಪುಲಿಕೇಶಿ ನಗರ ಬಳಿಯ ಹಚಿನ್ಸ್ ರಸ್ತೆ ಬಳಿ ಇಂದು ಬೆಳಗ್ಗಿನ ಜಾವ ಈ ನಡೆದಿದೆ. ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, ಕಟ್ಟಡದ ಅವೇಶಗಳಡಿ ಹಲವರು ಸಿಲುಕಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಎನ್ ಡಿಆರ್ ಎಫ್ ತಂಡ ಕಾರ್ಯಾಚರಣೆ ನಡೆಸಿ ಐದು  ಜನರನ್ನು ರಕ್ಷಿಸಿದ್ದು ಗಾಯಗೊಂಡವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ತುಂಬಾ ಗಂಭೀರವಾಗಿದೆ ಎನ್ನಲಾಗಿದೆ.

ಅವಶೇಷಗಳಡಿ ಸಿಲುಕಿದವರು ಪ್ರಮುಖವಾಗಿ ಬಿಹಾರ, ರಾಜಸ್ಥಾನ ಮತ್ತು ನೇಪಾಳ ಮೂಲದವರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಬಿಬಿಎಂಪಿ ಮೇಯರ್ ಗಂಗಾಂಬಿಕೆ, ಬಿಬಿಎಂಪಿ ಪೂರ್ವ ವಿಭಾಗದ ಜಂಟಿ ಆಯುಕ್ತ ರವೀಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

summary….

One dead and many trapped as a building under renovation collapses

Moisture in the soil and weak pillars is said to be the cause for the collapse.

37 workers — mainly from Bihar, Rajasthan and Nepal — and a family of a Nepali security guard feared trapped.

NDRF (National Disaster Relief Force) arrived at the spot to start rescue operations.

Out of 13, 5 were rescued and admitted to a local hospital — their condition is very critical.

City corporation officer, east — Ravindra — and his team visited Hutchins Road, Cook town where the incident took place.

Key words: Death –Bangalore- building -collapse