Tuesday, September 29, 2026

BDA Apartments

ಕುಡಿಯುವ ನೀರಿಗೆ ವಿಷ ಬೆರೆಸಿ ಪತಿಯಿಂದ ಪತ್ನಿ, ಇಬ್ಬರ ಮಕ್ಕಳ ಹತ್ಯೆ BDA JK_Adv BDA Adv
Home Crime ಕುಡಿಯುವ ನೀರಿಗೆ ವಿಷ ಬೆರೆಸಿ ಪತಿಯಿಂದ ಪತ್ನಿ, ಇಬ್ಬರ ಮಕ್ಕಳ ಹತ್ಯೆ.

ಕುಡಿಯುವ ನೀರಿಗೆ ವಿಷ ಬೆರೆಸಿ ಪತಿಯಿಂದ ಪತ್ನಿ, ಇಬ್ಬರ ಮಕ್ಕಳ ಹತ್ಯೆ.

ಮಂಡ್ಯ,ಏಪ್ರಿಲ್,18,2024 (www.justkannada.in): ಪತಿ ಮಹಾಶಯನೊಬ್ಬ ಕುಡಿಯುವ ನೀರಿಗೆ ವಿಷ ಬೆರೆಸಿ  ಪತ್ನಿ, ಇಬ್ಬರ ಮಕ್ಕಳನ್ನ ಹತ್ಯೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ಪಟ್ಟಣದಲ್ಲಿ ನಡೆದಿದೆ.

ನಾಗಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕೀರ್ತನಾ (23),  ಮಕ್ಕಳಾದ ಜಯಸಿಂಹ(4), ರಿಷಿಕಾ(1) ಮೃತಪಟ್ಟವರು. ಮೂವರಿಗೂ ಕ್ರಿಮಿನಾಶಕ ಹಾಕಿದ್ದ ನೀರುಕುಡಿಸಿ ಬಳಿಕ ತಾನೂ ಕುಡಿದಿದ್ದ.ಕುಡಿಯುವ ನೀರಿಗೆ ವಿಷ ಬೆರೆಸಿ ಪತಿಯಿಂದ ಪತ್ನಿ succide

ತಕ್ಷಣ ಇವರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಪತ್ನಿ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.  ನರಸಿಂಹಗೆ ನಾಗಮಂಗಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 5 ವರ್ಷದ ಹಿಂದೆ ಕೀರ್ತನಾ ಮತ್ತು ನರಸಿಂಹಗೆ  ಮದುವೆಯಾಗಿತ್ತು. ನರಸಿಂಹ ಕಟಿಂಗ್ ಶಾಪ್ ಇಟ್ಟುಕೊಂಡಿದ್ದ. ಇಬ್ಬರ ಮಧ್ಯೆ ಆಗಾಗ ಜಗಳವಾಗುತ್ತಿತ್ತು ಎನ್ನಲಾಗಿದೆ.

Key words:  Husband,kills. wife, children