Tuesday, September 29, 2026

BDA Apartments

Home Election 2024 ಮೊದಲಿನಿಂದಲೂ ದೇವೇಗೌಡರಿಂದ ಕ್ಷುಲ್ಲಕ ರಾಜಕಾರಣ-‘ಕೈ’ ಅಭ್ಯರ್ಥಿ ಡಿ.ಕೆ ಸುರೇಶ್ ವಾಗ್ದಾಳಿ

ಮೊದಲಿನಿಂದಲೂ ದೇವೇಗೌಡರಿಂದ ಕ್ಷುಲ್ಲಕ ರಾಜಕಾರಣ-‘ಕೈ’ ಅಭ್ಯರ್ಥಿ ಡಿ.ಕೆ ಸುರೇಶ್ ವಾಗ್ದಾಳಿ

ಬೆಂಗಳೂರು,ಏಪ್ರಿಲ್,18,2024 (www.justkannada.in): ಬಾಲಕಿಯನ್ನ ಅಪಹರಿಸಿ ಜಮೀನು ಬರೆಸಿಕೊಂಡಿರುವ ಆರೋಪ ಮಾಡಿರುವ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ವಿರುದ್ದ ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿರುವ ಡಿ.ಕೆ ಸುರೇಶ್,   ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಮತ್ತು ಹೆಚ್ ಡಿ ಕುಮಾರಸ್ವಾಮಿ ತನ್ನ ಮತ್ತು ಡಿಕೆ ಶಿವಕುಮಾರ್ ವಿರುದ್ಧ ಮಾಡುತ್ತಿರುವ ಆರೋಪಗಳಿಗೆ ತಕ್ಕ ಉತ್ತರ ನೀಡುತ್ತೇವೆ, ಬೇರೆಯವರ ಆಸ್ತಿ ಕಬಳಿಸುವ, ಬಾಲಕಿಯನ್ನು ಅಪಹರಿಸುವ ದುಸ್ಥಿತಿ ನಮಗೆ ಬಂದಿಲ್ಲ.  ಮೊದಲಿನಿಂದಲೂ ದೇವೇಗೌಡರು ಕ್ಷುಲ್ಲಕ ರಾಜಕಾರಣ  ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.ಮೊದಲಿನಿಂದಲೂ ದೇವೇಗೌಡರಿಂದ ಕ್ಷುಲ್ಲಕ ರಾಜಕಾರಣ dk suresh

ಕುಮಾರಸ್ವಾಮಿ ಕುಟುಂಬದಲ್ಲಿ ಯಾರು ಯಾರು ಕಲ್ಲು ಹೊಡೆದಿದ್ದಾರೆ, ಯಾರ ಜಮೀನು ಕಬಳಿಸಿದ್ದಾರೆ ಅನ್ನೋದನ್ನ ಮುಂದೆ ದಿನಗಳಲ್ಲಿ ತಿಳಿಸುತ್ತೇನೆ.  ಕೇಂದ್ರದ ಏಜೆನ್ಸಿಗಳನ್ನು ತಮ್ಮ ಆಪ್ತರು ಮತ್ತು ಸ್ಥಳೀಯ ಮುಖಂಡರ ವಿರುದ್ಧ ಛೂ ಬಿಡುವ ಕೆಲಸ ನಡೆದಿದೆ, ಆದಾಯ ತೆರಿಗೆ ಅಧಿಕಾರಿಗಳು ಕಾರ್ಯಕರ್ತರಿಗೆ ಬೆದರಿಕೆ ಒಡ್ಡುತ್ತಿದ್ದಾರೆ, ಇದೆಲ್ಲ ನಿಲ್ಲದಿದ್ದರೆ ಆದಾಯ ತೆರಿಗೆ ಕಚೇರಿಯ ಮುಂದೆ ಉಗ್ರ ಹೋರಾಟ ಮಾಡಬೇಕಾಗುತ್ತದೆ  ಎಂದು ಡಿ.ಕೆ ಸುರೇಶ್ ತಿಳಿಸಿದರು.

Key words: politics, HD Deve Gowda,  DK Suresh