‘ಬಾಯ್ಕಾಟ್ ಬ್ರಹ್ಮಾಸ್ತ್ರ’ ಅಭಿಯಾನದ ನಡುವೆಯೂ ಭರ್ಜರಿ ಕಲೆಕ್ಸನ್ !

ಬೆಂಗಳೂರು, ಸೆಪ್ಟೆಂಬರ್ 14, 2022 (www.justkannada.in):  ರಣ್ಬೀರ್​ ಕಪೂರ್​ ಹಾಗೂ ಆಲಿಯಾ ಭಟ್​ ಅಭಿನಯದ ‘ಬ್ರಹ್ಮಾಸ್ತ್ರ’ ಬಾಕ್ಸ್​ ಆಫೀಸ್​ನಲ್ಲಿ ಸದ್ದು ಮಾಡುತ್ತಿದೆ.

ಪ್ಯಾನ್​ ಇಂಡಿಯಾ ಚಿತ್ರವಾಗಿ ತೆರೆಕಂಡ ಬ್ರಹ್ಮಾಸ್ತ್ರ ಚಿತ್ರ ನಾಲ್ಕನೇ ದಿನ 14 ರಿಂದ 15 ಕೋಟಿ ರೂಪಾಯಿ ಬಾಚಿಕೊಂಡಿದೆ.

‘ಬಾಯ್ಕಾಟ್​ ಬ್ರಹ್ಮಾಸ್ತ್ರ’ ಅಭಿಯಾನದಿಂದ ಅಸಮಾಧಾನಗೊಂಡಿದ್ದ ಚಿತ್ರತಂಡಕ್ಕೆ ರಿಲೀಫ್​ ಸಿಕ್ಕಿದೆ. ಚಿತ್ರ ತೆರೆ ಕಂಡ ಮೊದಲ ದಿನದಿಂದ ಮೂರು ದಿನಗಳಲ್ಲಿ 225 ಕೋಟಿ ​ ಕಲೆಕ್ಷನ್​ ಮಾಡಿ ದಾಖಲೆ ಬರೆದಿದೆ.

ಮೊದಲ ದಿನ 75 ಕೋಟಿ ಗಳಿಸಿದ್ದ ಚಿತ್ರ, ಶನಿವಾರ 85 ಕೋಟಿ ಹಾಗೂ ಭಾನುವಾರ 65 ಕೋಟಿ ರೂಪಾಯಿ ಗಳಿಸಿತ್ತು. ಮೊದಲ ಮೂರು ದಿನದ ಕಲೆಕ್ಷನ್ ಹೋಲಿಸಿದರೆ ಸೋಮವಾರದ ಕಲೆಕ್ಷನ್ ತುಸು ಕಡಿಮೆ ಆಗಿದೆಯಾದರೂ, ಸಿನಿಮಾದ ಒಟ್ಟಾರೆ ಕಲೆಕ್ಷನ್ ಏರುಗತಿಯಲ್ಲಿಯೇ ಸಾಗಿದೆ.

ಅಂದಹಾಗೆ ಬ್ರಹ್ಮಾಸ್ತ್ರ ಚಿತ್ರ ರಿಲೀಸ್​ಗೂ ಮುನ್ನ ಭಾರೀ ವಿವಾದದಕ್ಕೆ ಕಾರಣವಾಗಿತ್ತು. ರಣ್ಬೀರ್​ ಕಪೂರ್ ಹೇಳಿಕೆಯಿಂದ ಅಸಮಾಧಾನಗೊಂಡಿದ್ದ ಸಿನಿ ಪ್ರಿಯರು, “ಬಾಯ್ಕಾಟ್​ ಬ್ರಹ್ಮಾಸ್ತ್ರ’ ಅಭಿಯಾನ ಆರಂಭಿಸಿದ್ದರು.