ನೋ ಪೊಲಿಟಿಕ್ಸ್ ಎಂದ ನಟ ಮೋಹನ್ ಲಾಲ್

ಬೆಂಗಳೂರು, ಸೆಪ್ಟೆಂಬರ್ 14, 2022 (www.justkannada.in): ರಾಜಕೀಯ ಅಖಾಡಕ್ಕೆ ಮಲಯಾಳಂ ನಟ ಮೋಹನ್ ಲಾಲ್ ಬರಲಿದ್ದಾರೆ ಎಂಬ ಸುದ್ದಿ ಸಾಕಷ್ಟು ಸದ್ದು ಮಾಡಿತ್ತು.

ಈ ಕುರಿತು ಸ್ವತಃ ಮೋಹನ್ ಲಾಲ್ ಸ್ಪಷ್ಟನೆ ನೀಡಿದ್ದಾರೆ. . ನನಗೆ ರಾಜಕೀಯಕ್ಕೆ ಬರಲ್ಲ, ಅದು ನನ್ನ ಕ್ಷೇತ್ರವಲ್ಲ. ರಾಜಕೀಯಕ್ಕೆ ಸೇರುವ ಬಗ್ಗೆ ಯಾವುದೇ ಗುರಿ ನನಗಿಲ್ಲ ಎಂದು ತಿಳಿಸಿದ್ದಾರೆ.

ನಾನು ಯಾವುದೇ ಒಂದು ಪಕ್ಷ ಸೇರಿದರೆ, ಆ ಪಕ್ಷಕ್ಕೆ ಮಾತ್ರ ಸೀಮಿತವಾಗಿರಬೇಕು. ಆದರೆ ಈಗ ಹಾಗಲ್ಲ. ನಮ್ಮ ಯೋಚನೆಗಳನ್ನ ಬೇರೆಯವರೊಂದಿಗೆ ಹಂಚಿಕೊಳ್ಳಬಹುದು ಎಂದು ಮೋಹನ್ ಲಾಲ್ ಹೇಳಿದ್ದಾರೆ.

ಅಂದಹಾಗೆ ಸದ್ಯ ಮೋಹನ್ ಲಾಲ್ ನಟನೆಯ ನಾಲ್ಕೈದು ಸಿನಿಮಾಗಳೂ ಪೋಸ್ಟ್ ಪ್ರೊಡಕ್ಷನ್ ಹಾಗೂ ಆರೇಳು ಸಿನಿಮಾಗಳೂ ಪ್ರೀ ಪ್ರೊಡಕ್ಷನ್ ಕೆಲಸದಲ್ಲಿವೆ.