ಫಲಿತಾಂಶದ ದಿನ ಯಾರು ಲೆಕ್ಕಕ್ಕೆ ಇಲ್ಲ ಅಂತಾ ಗೊತ್ತಾಗುತ್ತೆ- ಸಿದ್ಧರಾಮಯ್ಯಗೆ ಎಂಟಿಬಿ ನಾಗರಾಜ್ ತಿರುಗೇಟು…

ಬೆಂಗಳೂರು,ನ,18,2019(www.justkannada.in): ಮಾಜಿ ಸಿಎಂ ಸಿದ್ದರಾಮಯ್ಯ ಉಪಚುನಾವಣೆಯಲ್ಲಿ ನಾನು ‌ಲೆಕ್ಕಕ್ಕೇ ಇಲ್ಲ ಎಂದಿದ್ದಾರೆ. ಫಲಿತಾಂಶದ ದಿನ ಯಾರು ಲೆಕಕ್ಕೆ ಇಲ್ಲ ಅಂತಾ ತಿಳಿಯುತ್ತೆ ಎಂದು ಹೊಸಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ತಿರುಗೇಟು ನೀಡಿದರು.

ಮಾಧ್ಯಮಗಳ ಜತೆ ಇಂದು ಮಾತನಾಡಿದ ಎಂಟಿಬಿ ನಾಗರಾಜ್,  ಉಪಚುನಾವಣೆಯಲ್ಲಿ ನಾನು ‌ಲೆಕ್ಕಕ್ಕೇ  ಇಲ್ಲ ಅಂತ ಹೇಳಿದ್ದಾರೆ.  ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ಯಾರು ಹೋಗ್ತಾರೆ‌ ನೋಡೋಣ. ನಾನು‌ ಮೋಸಗಾರ, ಮನೆಮುರುಕ ಅಲ್ಲ. ಕ್ಷೇತ್ರದ ಅಭಿವೃದ್ಧಿ ಹಾಗೂ  ಸ್ವಾಭಿಮಾನಕ್ಕಾಗಿ ರಾಜೀನಾಮೆ ನೀಡಿ ಚುನಾವಣೆ ಎದುರಿಸಿತ್ತಿದ್ದೇನೆ. ಜನ ನನಗೆ ಆಶೀರ್ವಾದ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Key words: hoskote-by-election- MTB Nagaraj – tong-former cm-Siddaramaiah