ಚುನಾವಣೆಗೆ ನಿಲ್ಲುವಂತೆ ಸಿದ್ಧರಾಮಯ್ಯಗೆ ಸವಾಲು: ಹೆಚ್. ವಿಶ್ವನಾಥ್ ಗೆಲುವು ದೇವರಾಜ ಅರಸು ಅವರ ಗೆಲುವು ಎಂದು  ಸಚಿವ ಶ್ರೀರಾಮುಲು…..

ಮೈಸೂರು,ನ,18,2019(www.justkannada.in):  ಹೂಣಸೂರಿನಲ್ಲಿ ಹೆಚ್.ವಿಶ್ವನಾಥ್ ಗೆಲುವು ಡಿ.ದೇವರಾಜ್ ಅರಸು ಅವರ ಗೆಲುವು, ಮೋದಿ ಅವರ ಗೆಲುವು ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು.

ಹುಣಸೂರು ಉಪಚುನಾವಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಇಂದು ಹೆಚ್. ವಿಶ್ವನಾಥ್ ನಾಮಪತ್ರ ಸಲ್ಲಿಸಿದರು. ಈ ವೇಳೆ ಸಚಿವ ಬಿ ಶ್ರೀರಾಮುಲು ಸಾಥ್ ನೀಡಿದರು. ಬಳಿಕ ಮಾತನಾಡಿದ ಸಚಿವ ಶ್ರೀರಾಮುಲು, ವಿಶ್ವನಾಥ್ ಅವರ ತ್ಯಾಗದಿಂದ ನಮ್ಮ ಸರ್ಕಾರ ರಚನೆಯಾಗಿದೆ.  ಬಿಸಿಯೂಟ ಯೋಜನೆ ಜಾರಿಗೆ ತಂದವರು ವಿಶ್ವನಾಥ್ ಎಸ್.ಎಂ ಕೃಷ್ಣ. ಕಾಂಗ್ರೆಸ್ ಜೆಡಿಎಸ್ ಬಿಜೆಪಿಯನ್ನು ಸೋಲಿಸಲು ಮುಂದಾಗಿದ್ದಾರೆ. ಕಾಂಗ್ರೆಸ್ ಜೆಡಿಎಸ್ ದೇಶದಲ್ಲಿ ಎಲ್ಲೂ ಇಲ್ಲ ಎಂದು ಟೀಕಿಸಿದರು.

ವಿಶ್ವನಾಥ್  ಶ್ರಮದಿಂದಲೇ ಸಿದ್ಧರಾಮಯ್ಯ ಸಿಎಂ ಆಗಿದ್ದು….

ವಿಶ್ವನಾಥ್ ಗೆಲುವು ಪ್ರಧಾನಿ ನರೇಂದ್ರ ಮೋದಿ ಗೆಲುವು. ನಾವು ಚುನಾವಣೆ ಗೆಲ್ಲಲೇಬೇಕು ಅಂತಾ ಮೋದಿ ಸೂಚಿಸಿದ್ದಾರೆ. ವಿಶ್ವನಾಥ್ ಗೆದ್ದ ಮರುದಿನವೇ ಮಂತ್ರಿಯಾಗುತ್ತಾರೆ. ವಿಶ್ವನಾಥ್ ಅವರನ್ನು ತುಳಿಯುವ ವ್ಯವಸ್ಥೆ ಮಾಡಿದ್ದು ಸಿದ್ದರಾಮಯ್ಯ. ಸಿದ್ದರಾಮಯ್ಯ ವಿಶ್ವನಾಥ್ ಶ್ರಮದಿಂದಲೇ ಸಿಎಂ ಆಗಿದ್ದು. ಸಿದ್ದರಾಮಯ್ಯಗೆ ಪಕ್ಷಾಂತರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಶ್ರೀರಾಮುಲು ಗುಡುಗಿದರು.

ನಾನೇ ಅವರ ಎದುರಿಗೆ ಚುನಾವಣೆಗೆ ನಿಲ್ತಿನಿ, ಬರಲಿ-ಸವಾಲು…

ಬಾದಾಮಿಯ ಶಾಸಕ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಲಿ. ನಾನೇ ಅವರ ಎದುರಿಗೆ ಚುನಾವಣೆಗೆ ನಿಲ್ತಿನಿ. ಇದು ಕಾಂಗ್ರೆಸ್ ಗೆ ನಾನು ಹಾಕುತ್ತಿರುವ ಸವಾಲು ಎಂದು ಶ್ರೀರಾಮುಲು ಚಾಲೇಂಜ್ ಮಾಡಿದರು.

Key words: Challenge – Siddaramaiah – election-challenge-Minister -Sriramulu