ಶರತ್ ಬಚ್ಚೇಗೌಡ ಪಕ್ಷದಿಂದ ಉಚ್ಛಾಟನೆ: ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ರೆ ಕ್ರಮ – ಸಿಎಂ ಬಿಎಸ್ ಯಡಿಯೂರಪ್ಪ ಎಚ್ಚರಿಕೆ

ಬೆಂಗಳೂರು,ನ,18,2019(www.justkannada.in):  ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಶರತ್ ಬಚ್ಚೇಗೌಡರನ್ನ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.

ಹೊಸಕೋಟೆ ಉಪ ಚುನಾವಣೆ ಹಿನ್ನೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಪರವಾಗಿ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ  ಸಿಎಂ ಬಿಎಸ್ ಯಡಿಯೂರಪ್ಪ, ಬಿಜೆಪಿಯಿಂದ ಶರತ್ ಬಚ್ಚೇಗೌಡ ಅವರನ್ನು ಉಚ್ಛಾಟಿಸಲಾಗಿದೆ. ಅವರ ತಂದೆ ವಿರುದ್ದವೂ ಕ್ರಮ ಕೈಗೊಳ್ಳಲು ಕೇಂದ್ರ ಬಿಜೆಪಿಗೆ ಶಿಫಾರಸ್ಸು ಮಾಡಲಾಗಿದೆ. ಯಾರೇ ಪಕ್ಷ ವಿರೋಧಿ ಚಟುವಟಿಕೆ ಮಾಡಿದರೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಎಂಟಿಬಿ ಅವರನ್ನ ಬಿಜೆಪಿ ಕರೆ ತನ್ನಿ ಎಂದು ಹೇಳಿದ್ದೇ ಅವರು. ಆಗ ಎಂಟಿಬಿ ನಾಗರಾಜ್ ಬಿಜೆಪಿಗೆ ಬರಲು ಶರತ್ ಬಚ್ಛೇಗೌಡ ಮತ್ತು ತಂದೆ ಬಚ್ಚೇಗೌಡ ಇಬ್ಬರು ಒಪ್ಪಿದ್ದರು. ಆರ್. ಅಶೋಕ್ ಇದಕ್ಕೆ ಸಾಕ್ಷಿ. ಅಶೋಕ್ ಅವರ ಸಮ್ಮುಖದಲ್ಲೇ ಒಪ್ಪಿದ್ದರು. ಆದರೆ ಈಗ ಅಪ್ಪಮಗ ರಾಗ ಬದಲಿಸಿ ಉಲ್ಟಾ ಹೊಡೆದಿದ್ದಾರೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ವಾಗ್ದಾಳಿ ನಡೆಸಿದರು.

Key words: hoskote –by-election- Sarath Bachegowda-bjp- CM BS Yeddyurappa