ಸ್ಯಾಂಟ್ರೋ ರವಿ ಕೈಯಲ್ಲಿ ಬಿಜೆಪಿ ನಾಯಕರ ಚರಿತ್ರೆ: ಅದನ್ನ ಮರೆಮಾಚಲು ಗೃಹಸಚಿವರು ಗುಜರಾತ್ ಗೆ ಹೋಗಿದ್ರಾ.?- ಎಂ. ಲಕ್ಷ್ಮಣ್ ಹೊಸಬಾಂಬ್

ಮೈಸೂರು,ಜನವರಿ,14,2023(www.justkannada.in): ಗುಜರಾತ್ ನಲ್ಲಿ ಸ್ಯಾಂಟ್ರೋ ರವಿ ತಂಗಿದ್ದ ಸ್ಥಳದಿಂದ ಕೇವಲ 300 ಮೀಟರ್ ದೂರದಲ್ಲಿ  ಗೃಹ ಸಚಿವ ಅರಗ ಜ್ಞಾನೇಂದ್ರ ತಂಗಿದ್ದರು. ಬಿಜೆಪಿಯ ಮಹಾ ನಾಯಕರ ಚರಿತ್ರೆ ಸ್ಯಾಂಟ್ರೋ ರವಿ ಕೈಯಲ್ಲಿದೆ. ಅದನ್ನ ಮರೆಮಾಚಲು ಅರಗ ಜ್ಞಾನೇಂದ್ರ ಗುಜರಾತ್ ಗೆ ಹೋಗಿದ್ರಾ.? ಏನು ಎಂಬ ಸತ್ಯ ತಿಳಿಸಿ  ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೊಸ ಬಾಂಬ್ ಸಿಡಿಸಿದರು.

ರಾಜ್ಯದಲ್ಲಿ ಸಂಚಲನ ಮೂಡಿಸಿದ ಸ್ಯಾಂಟ್ರೊ ರವಿಯನ್ನ ನಿನ್ನೆ ಗುಜರಾತ್ ನ ಅಲಹಾಬಾದ್ ನಲ್ಲಿ ಬಂಧಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಲಕ್ಷಣ್ , ಸ್ಯಾಂಟ್ರೋ ರವಿ ಬಂಧಿಸಲು ಪೊಲೀಸ್ ಇಲಾಖೆ ಇಷ್ಟೊಂದು ಸಾಹಸ ಮಾಡುವ ಅವಶ್ಯಕತೆ ಏನಿತ್ತು.? ಆತನ ಮೇಲೆ ಹಾಕಿರುವ ಕೇಸ್ ಕೋರ್ಟಿನಲ್ಲಿ ನಿಲ್ಲಲ್ಲ. ಗುಜರಾತ್ ನಲ್ಲಿ ಗೃಹ ಮಂತ್ರಿ ಅರಗ ಜ್ಞಾನೇಂದ್ರಗೆ ಏನು ಕೆಲಸ ಇತ್ತು.? ಪೂರ್ವ ನಿಯೋಜಿತ ಕೆಲಸವೇನಾದರು ಇತ್ತೇ.? ಯಾರ ಹೆಸರಿನಲ್ಲಿ ಟಿಕೆಟ್ ಬುಕ್ ಮಾಡಿ ಅರಗ ಗುಜರಾತ್ ಗೆ ತೆರಳಿದ್ದರು? ದಯಮಾಡಿ ಜನರಿಗೆ ತಿಳಿಸಿ. ಸ್ಯಾಂಟ್ರೋ ರವಿ ವಿಚಾರದಲ್ಲಿ ಬಿಜೆಪಿ ಜನರಿಗೆ ಸುಳ್ಳು ಮಾಹಿತಿ ನೀಡುತ್ತಿದೆ. ಬಿಜೆಪಿಯ ಮಹಾ ನಾಯಕರ ಚರಿತ್ರೆ ಸ್ಯಾಂಟ್ರೋ ರವಿ ಕೈಯಲ್ಲಿದ್ದು, ಅದನ್ನ ಮರೆಮಾಚಲು ಗುಜರಾತ್ ಗೆ ಹೋಗಿದ್ರಾ.? ಏನು ಎಂಬ ಸತ್ಯ ತಿಳಿಸಿ. ಬಿಜೆಪಿಯ ಬಾಂಬೆ ಬಾಯ್ಸ್ ಭವಿಷ್ಯ ಕೂಡ ಸ್ಯಾಂಟ್ರೋ ರವಿ ಕೈಯಲ್ಲಿದೆ. ಸ್ಯಾಂಟ್ರೋ ರವಿಗೆ ಯಾವ ರೀತಿ ಹೇಳಿಕೆ ಕೊಡಬೇಕು ಎಂಬುದನ್ನು ಹೇಳಿಕೊಡಲು ಅಲ್ಲಿಗೆ ಹೋಗಿದ್ರಾ ಅರಗ ಜ್ಞಾನೇಂದ್ರ ಎಂದು ಕುಟುಕಿದರು.

ಬಿಜೆಪಿಯ 47 ಮಂದಿ ಹಾಲಿ ಎಂಎಲ್ಎ ಗಳ  ವಿರುದ್ಧ ಕ್ರಿಮಿನಲ್ ಕೇಸ್ ಇದೆ, 13ಮಂದಿ ಹಾಲಿ ಸಚಿವರ ಮೇಲೆ ಸೆಕ್ಸುವಲ್ ಕೇಸ್   ದಾಖಲಾಗಿದೆ. ಬಹುತೇಕ ಬಿಜೆಪಿಗರು ಸೆಕ್ಸುವಲ್  ಕೇಸ್ ನಲ್ಲಿ ಸಿಕ್ಕಿಕೊಂಡಿದ್ದಾರೆ. ಅರಗ ಜ್ಞಾನೇಂದ್ರ ಹಿಟ್ ಅಂಡ್ ರನ್ ಅನ್ನು ಸ್ಯಾಂಟ್ರೋ ರವಿ ಪ್ರಕರಣದಲ್ಲಿ ಮಾಡಬಾರದು. 6 ಮಂದಿ ಐಪಿಎಸ್ ಅನ್ನು ಕೂರಿಸಿಕೊಂಡು ಎಡಿಜಿಪಿ ಸುದ್ದಿಗೋಷ್ಠಿ ಮಾಡಿ ಆತನನ್ನು ಅಂತರಾಷ್ಟ್ರೀಯ ಮಟ್ಟಕ್ಕೇರಿಸಿದ್ದಾರೆ.  ಇದನ್ನು ನೋಡಿದರೆ ಸ್ಯಾಂಟ್ರೋ ರವಿ ಕೈಯಲ್ಲಿ ಇವರೆಲ್ಲರ ಜುಟ್ಟು ಇದೆ ಎನಿಸಿದೆ. ಬಿಜೆಪಿ ಪೊಲೀಸ್ ಇಲಾಖೆಯ ಎಲ್ಲಾ ಹುದ್ದೆಗಳಿಗೂ ಆಕ್ಷನ್ ಮಾಡ್ತಿವೆ. ಪೊಲೀಸ್ ಇಲಾಖೆ ಸಂಪೂರ್ಣ ಬಿಜೆಪಿ ಹಿಡಿತದಲ್ಲಿಟ್ಟುಕೊಂಡಿದೆ. ಬಂಧಿತ  ಯಾರನ್ನ ರೇಪ್ ಮಾಡಿದ್ದಾನೆಂದು ಪೊಲೀಸರು ತಿಳಿಸಬೇಕು. ರೇಪ್ ಕೇಸ್ ಹಾಕಿರುವುದು ಬಿಜೆಪಿಯ ಕಣ್ಣೋರೆಸುವ ತಂತ್ರವಾಗಿದೆ. 12 ದಿನಗಳ ನಂತರ ಮಾಹಿತಿ ಒಪ್ಪಂದದ ಮೂಲಕ ಕರೆ ತಂದಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ವಾಗ್ದಾಳಿ ನಡೆಸಿದರು.

2004 ರಲ್ಲಿ ನಿಮ್ಮ ಆದಾಯದ ಮೂಲ ಎಷ್ಟು? 2014 ರಲ್ಲಿ 50 ಕೋಟಿ ಹೇಗಾಯ್ತು..? ಸಿಟಿ ರವಿಗೆ ಟಾಂಗ್

ಇದೇ ವೇಳೆ ಶಾಸಕ ಸಿಟಿ ರವಿ ವಿರುದ್ದವೂ ಹರಿಹಾಯ್ದ ಎಂ.ಲಕ್ಷ್ಮಣ್, ಸಿ.ಟಿ.ರವಿ ನೇರವಾಗಿ ತಿಳಿಸುತ್ತೇನೆ. ಅವರು ನನ್ನ ಮೇಲೆ ಹಾಕಿರುವ ಪ್ರಕರಣವನ್ನು ಸ್ವಾಗತಿಸುತ್ತೇನೆ. 599 ಐಪಿಸಿ, 600 ಐಪಿಸಿ ಹಾಕಿದ್ದಿರಿ. 2004 ರಲ್ಲಿ ನಿಮ್ಮ ಆದಾಯದ ಮೂಲ ಎಷ್ಟು? 2014 ರಲ್ಲಿ 50 ಕೋಟಿ ಹೇಗಾಯ್ತು. ನಿಮ್ಮ ಹೆಸರಿನ ಆಸ್ತಿ ಬಗ್ಗೆ ನಾ ಮಾತನಾಡಿಲ್ಲ. ಭಾವ, ಬಾಮೈದನಿಗೆ ಗುತ್ತಿಗೆ ನೀಡಿದ್ದಿರಿ, ಆಸ್ತಿ ಭಾವನ ಹೆಸರಲ್ಲಿ ಮಾಡಿದ್ದಿರಿ. ಬೆಂಗಳೂರು, ದೇವನಹಳ್ಳಿ ಹತ್ತಿರ ಬೇನಾಮಿ ಹೆಸರಲ್ಲಿ 2 ಸಾವಿರ ಕೋಟಿ ಮಾಡಿದ್ದಾರೆಂಬ ಜನರ ಆರೋಪದ ಬಗ್ಗೆ ಮಾತನಾಡಿದ್ದೇನೆ ಎಂದು ಕಿಡಿಕಾರಿದರು.

1.4 ಕೋಟಿ ಮನೆಗಳಿಗೆ 200 ಯುನಿಟ್ ವಿದ್ಯುತ್ ಕೊಡುತ್ತಿವಿ ಅಂತಾ? ಹೇಳಿದ್ದೇವೆ. ಬಿಜೆಪಿ ಸರ್ಕಾರ 8 ಬಾರಿ ವಿದ್ಯುತ್ ಹೆಚ್ಚಳ ಮಾಡಿದ್ದಾರೆ. 5.50 ಪೈಸ್ ಯೂನಿಟ್ ಗೆ ಹೆಚ್ಚಳ ಆಗಿದೆ. ಹೀಗಾಗಿ ನಮ್ಮ ಘೋಷಣೆಯಿಂದ 1000 ಕಡಿಮೆ ಆಗಲಿದೆ. ದಶಪಥ ರಸ್ತೆ ಕ್ರೆಡಿಟ್ ಕಾಂಗ್ರೆಸ್ ಪಕ್ಷಕ್ಕೆ ಹೋಗಬೇಕು.  17 ಸಭೆ ನಡೆಸಿ ಅನುಮತಿ ತಂದಿದ್ದು ಕಾಂಗ್ರೆಸ್.  ಅದನ್ನು ನಮ್ಮದೆಂದು ಸಂಸದ ಪ್ರತಾಪಸಿಂಹ ಪುಂಗಿ  ಊದುತ್ತಿದ್ದಾರೆ. 6 ಕಿ.ಮೀ.ವರಗೆ ಮಾತ್ರ ಮೈಸೂರು ಕ್ಷೇತ್ರ.  ಉಳಿದಿದ್ದು, ಸುಮಲತಾ ಡಿ.ಕೆ.ಸುರೇಶ್ ಗೆ ಸೇರಿದೆ ಎಂದು ಸಂಸದ ಪ್ರತಾಪ್ ಸಿಂಹಗೆ ಟಾಂಗ್ ನೀಡಿದರು.

Key words: History – BJP-leaders – Santro Ravi- Gujarat –kpcc-spokeperson-M. Laxman