ಅತ್ಯಂತ ಕೀಳು ಹಂತಕ್ಕೆ BJP v/s BJP ಕಿತ್ತಾಟ: ಇದು ಡಬಲ್ ಇಂಜಿನ್ ಸರ್ಕಾರದ ಕೊನೆಯ ದಿನಗಳು- ರಾಜ್ಯ ಕಾಂಗ್ರೆಸ್ ಟ್ವಿಟ್.

ಬೆಂಗಳೂರು,ಜನವರಿ,14,2023(www.justkannada.in):  ಸಚಿವ ಮುರುಗೇಶ್ ನಿರಾಣಿ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಳ್ ನಡುವೆ ನಡೆದ ವಾಕ್ಸಮರದ ಬಗ್ಗೆ  ರಾಜ್ಯ ಕಾಂಗ್ರೆಸ್  ಘಟಕ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿ ಬಿಜೆಪಿಯನ್ನ ಲೇವಡಿ ಮಾಡಿದೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್,  ಆಪರೇಷನ್ ಕಮಲದ ಮೂಲಕ ಅಧಿಕಾರ ಪಡೆದ ಬಿಜೆಪಿ ನಿಜ ಬಣ್ಣ ದಿನೇ ದಿನೇ ಬಟಾ ಬಯಲಾಗುತ್ತಿದೆ! ವಾಮ ಮಾರ್ಗದ ಮೂಲಕ ಅಧಿಕಾರ ಪಡೆದ ಬಿಜೆಪಿ ತನ್ನದೇ ಪಕ್ಷದ ಶಾಸಕರ ಹೇಳಿಕೆಗಳಿಂದ ಪ್ರತಿ ದಿನ ಬೆತ್ತಲಾಗುತ್ತಿದೆ. ರಾಜ್ಯದ ಜನ ಬಿಜೆಪಿ ಗೆ ಪಾಠ ಕಲಿಸಲು ಕಾಯ್ತಿತಿದ್ದಾರೆ!

ಈ ಭ್ರಷ್ಟ ಬಿಜೆಪಿ ಸರ್ಕಾರಕ್ಕೆ ಜನಾಭಿಪ್ರಾಯ ಇಲ್ಲವೇ ಇಲ್ಲ. ಸ್ವಂತ ಶಕ್ತಿಯ ಮೇಲೆ ಗೆಲ್ಲುವ ಸಾಮರ್ಥ್ಯವೂ ಇಲ್ಲ. ಆಪರೇಷನ್ ಕಮಲದಂತಹ ಅನಿಷ್ಟಗಳ ಮೂಲಕ ಸರ್ಕಾರ ಮಾಡುತ್ತೇವೆ ಎಂದು ಘಂಟಾಘೋಷವಾಗಿ ಲಜ್ಜೆಯಿಲ್ಲದೆ ಹೇಳಿಕೊಳ್ಳುವ ಪ್ರಪಂಚದ ಏಕೈಕ ಪಕ್ಷ ಬಿಜೆಪಿ ಎಂದು ಟೀಕಿಸಿದೆ.

ಅಸಹ್ಯದ ಪರಮಾವಧಿ ತಲುಪಿದೆ ಬಿಜೆಪಿ. ಒಬ್ಬರು ‘ನೀಚ’ ಎನ್ನುತ್ತಾರೆ, ಮತ್ತೊಬ್ಬರು ‘ಪಿಂಪ್’ ಎನ್ನುತ್ತಾರೆ, ಇನ್ನೊಬ್ಬರು ‘ಸಿಡಿ’ ಎನ್ನುತ್ತಾರೆ, ಬಿಜೆಪಿ v/s ಬಿಜೆಪಿ ಕಿತ್ತಾಟ ಅತ್ಯಂತ ಕೀಳು ಹಂತಕ್ಕೆ ತಲುಪಿದೆ. ತಮ್ಮ ಪಕ್ಷವನ್ನೇ ನಿಭಾಯಿಸಲಾಗದ ಅಸಮರ್ಥ ಕಟೀಲು ಕಾಂಗ್ರೆಸ್ ಬಗ್ಗೆ ಮಾತಾಡುವುದು ಆಕಾಶಕ್ಕೆ ಉಗುಳಿದಂತೆಯೇ ಸರಿ ಎಂದು ಚಾಟಿ ಬೀಸಿದೆ.

ಇನ್ನು ಕಿತ್ತಾಟದಲ್ಲಿ ಒಂದೊಂದೇ ರಹಸ್ಯ ಹೊರಬೀಳುತ್ತಿವೆ. ಯತ್ನಾಳ್‌ ರ ಕಾರುಚಾಲಕನ ಕೊಲೆ ನಡೆದಿದ್ದು ಯಾವಾಗ? ಕೊಲೆ ಮಾಡಿದವರು ಯಾರು? ಏಕೆ ಮುಚ್ಚಿ ಹಾಕಲಾಯ್ತು? ಕೊಲೆಯ ಹಿಂದಿನ ರಹಸ್ಯವೇನು? ಕೊಲೆಯ ತನಿಖೆ ಮಾಡಲಿಲ್ಲವೇಕೆ? ಸಿಎಂ ಬೊಮ್ಮಾಯಿ ಅವರೇ ಈ ಗಂಭೀರ ವಿಷಯದ ಬಗ್ಗೆ ಉತ್ತರಿಸುವ ಹೊಣೆ ನಿಮ್ಮದು ಎಂದು ಸಿಎಂ ಬೊಮ್ಮಾಯಿಗೆ ಕಾಂಗ್ರೆಸ್ ಒತ್ತಾಯಿಸಿದೆ.

ರಾಜ್ಯ ಬಿಜೆಪಿ ಸರ್ಕಾರದ ಭವಿಷ್ಯ ಬಿಜೆಪಿ ನಾಯಕರ ಬಾಯಲ್ಲೇ ಕಾಣಿಸುತ್ತಿದೆ. ಈ ಭ್ರಷ್ಟ ಬಿಜೆಪಿ ಸರ್ಕಾರಕ್ಕೆ ಜನಾಭಿಪ್ರಾಯ ಇಲ್ಲ, ಮುಂದೆ ಅಧಿಕಾರಕ್ಕೆ ಬರುವುದೂ ಇಲ್ಲ ಎಂಬ ಸತ್ಯ ಅವರಿಗೂ ಗೊತ್ತಿದೆ. ಡಬಲ್ ಇಂಜಿನ್ ಸರ್ಕಾರ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದೆ.

ಕಪೋಲ ಕಲ್ಪಿತ ‘ಚುನಾವಣಾ ಚಾಣಕ್ಯ’ನ ವಾಸ್ತವ ನಡವಳಿಕೆ ಬಿಜೆಪಿ ನಾಯಕರಿಗೇ ಗೊತ್ತಿದೆ. ಕ್ರಿಮಿನಲ್ ಪ್ರಕರಣದಲ್ಲಿ ಜೈಲು ಸೇರಿ ಬಂದವರ ರೌಡಿಸಂ ವರ್ತನೆ ಸಹಜ. ನಾಯಕರೇ ರೌಡಿಗಳಾಗಿರುವಾಗ ಅವರ ಪಕ್ಷಕ್ಕೆ ರೌಡಿಗಳ ಸೇರ್ಪಡೆಯೂ ಸಹಜವೇ. ಬಿಜೆಪಿ ಪಕ್ಷ ರೌಡಿಗಳ ಪಕ್ಷ ಎಂಬುದು ಅವರ ನಾಯಕರಿಂದಲೇ ಮತ್ತೊಮ್ಮೆ ಸಾಬೀತಾಗಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.

Key words: BJP v/s BJP-last days – double engine -govt- State -Congress -tweet.