ಪ್ರೀತಿ ನಿರಾಕರಿಸಿದ ಪ್ರೇಯಸಿ ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಯುವಕ

ಕೊಪ್ಪಳ,ಜನವರಿ,14,2023(www.justkannada.in): ಪ್ರೀತಿ ನಿರಾಕರಿಸಿದ ಪ್ರೇಯಸಿಯನ್ನ ಕೊಂದು ಪ್ರಿಯಕರನೋರ್ವ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಕೊಪ್ಪಳ ಜಿಲ್ಲೆ ಬಳಗೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.  ಪ್ರಕಾಶ್ ಎಂಬಾತನೇ ತನ್ನ ಪ್ರೇಯಸಿ ಸುಮಾಳನ್ನ ಹತ್ಯೆಗೈದಿದ್ದಾನೆ. ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಇಬ್ಬರು ಹಲವು ದಿನಗಳಿಂದ ಪ್ರೀತಿಸುತ್ತಿದ್ದರು. ಈ ಮಧ್ಯೆ ಪ್ರೀತಿಗೆ ಪೋಷಕರು ವಿರೋಧಿಸಿದ ಹಿನ್ನೆಲೆ ಸುಮಾ ಪ್ರೀತಿ ನಿರಾಕರಿಸಿದ್ದಳು. ಈ ಹಿನ್ನೆಲೆಯಲ್ಲಿ ಇಂದು ಯುವತಿ ಮನೆಯಲ್ಲೇ ಆಕೆಯನ್ನ ಪ್ರಕಾಶ್ ಹತ್ಯೆ ಮಾಡಿ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ಕುಕನೂರು ಪೊಲೀಸರು ಭೇಟಿ ‍ನೀಡಿ ಪರಿಶೀಲಿಸಿದ್ದಾರೆ.

Key words: young man -committed -suicide -killing -girlfriend –koppal