Thursday, September 17, 2026

BDA Apartments

ಸಿದ್ಧರಾಮಯ್ಯ ವಿರುದ್ಧದ ಸಚಿವ ಅಶ್ವಥ್ ನಾರಾಯಣ್ ಹೇಳಿಕೆಗೆ ಸ್ವಪಕ್ಷಿಯರಿಂದ...
Home Front Page ಸಿದ್ಧರಾಮಯ್ಯ ವಿರುದ್ಧದ ಸಚಿವ ಅಶ್ವಥ್ ನಾರಾಯಣ್  ಹೇಳಿಕೆಗೆ ಸ್ವಪಕ್ಷಿಯರಿಂದಲೇ ಆಕ್ಷೇಪ

ಸಿದ್ಧರಾಮಯ್ಯ ವಿರುದ್ಧದ ಸಚಿವ ಅಶ್ವಥ್ ನಾರಾಯಣ್  ಹೇಳಿಕೆಗೆ ಸ್ವಪಕ್ಷಿಯರಿಂದಲೇ ಆಕ್ಷೇಪ

ಬೆಂಗಳೂರು,ಫೆಬ್ರವರಿ,16,2023(www.justkannada.in): ಟಿಪ್ಪು ಹೊಡೆದಂತೆ ಸಿದ್ಧರಾಮಯ್ಯರನ್ನು ಹೊಡೆದು ಹಾಕೋಣ ಎಂಬ ಸಚಿವ ಅಶ್ವಥ್ ನಾರಾಯಣ್ ಹೇಳಿಕೆಗೆ ಸ್ವಪಕ್ಷೀಯ ನಾಯಕರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ  ಕಾರ್ಯದರ್ಶಿ ಸಿ.ಟಿ ರವಿ, ಸಿದ್ದರಾಮಯ್ಯ ರಾಜಕೀಯ ವಿರೋಧಿ ಮಾತ್ರ.  ಶತ್ರು ಅಲ್ಲ. ಸಚಿವ ಅಶ್ವಥ್ ನಾರಾಯಣ್ ಮಾತುಗಳನ್ನ ಒಪ್ಪುವುದಿಲ್ಲ. ಸಿದ್ಧರಾಮಯ್ಯಗೆ ಭಗವಂತ ದೀರ್ಘಾಯಿಷ್ಯ ಕೊಡಲಿ ಎಂದು ಪ್ರಾರ್ಥಿಸಿದರು.

ಹಾಗೆಯೇ ಕಾಂಗ್ರೆಸ್ ವಿರುದ್ದ ವಾಗ್ದಾಳಿ ಮುಂದುವರೆಸಿದ ಶಾಸಕ ಸಿ.ಟಿ ರವಿ,   ದೇಶ ಒಡೆದಿದ್ದು ಕಾಂಗ್ರೆಸ್ ನವರು.ಜಾತಿವಾರು ವಿಭಜನೆ ಮಾಡಿದ್ದ ಕಾಂಗ್ರೆಸ್. ಭಾಷೆ ಆಧಾರದಲ್ಲಿ ದೇಶ ವಿಭಜನೆ ಮಾಡಿದ್ರು. ಭ‍್ರಷ್ಟಾಚಾರದ ಬೀಜ  ಬಿತ್ತಿದ್ದು ಕಾಂಗ್ರೆಸ್ ನವರು ಎಂದು ಹೇಳಿದರು.

ಅಶ್ವಥ್ ನಾರಾಯಣ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಅಶಥ್ ನಾರಾಯಣ್  ಹಾಗೆ ಮಾತನಾಡಿದ್ರೆ ನಾವು ಖಂಡಿಸುತ್ತೇವೆ. ವಿರೋಧ ಪಕ್ಷದವರಿಗೆ ನಾವು ಗೌರವ ಕೊಡುತ್ತೇವೆ ಎಂದರು.

Key words: Minister- Aswath Narayan- statement-against -Siddaramaiah –objected-CT Ravi