ಸಿದ್ಧರಾಮಯ್ಯ ವಿರುದ್ದ ವಿವಾದಾತ್ಮಕ ಮಾತು; ಸಚಿವ ಅಶ್ವಥ್ ನಾರಾಯಣ್ ವಿರುದ್ದ ಹೆಚ್.ಡಿಕೆ ಮತ್ತು ಸಿಎಂ ಇಬ್ರಾಹಿಂ ಕಿಡಿ.

ಬೆಂಗಳೂರು,ಫೆಬ್ರವರಿ,16,2023(www.justkannada.in): ಟಿಪ್ಪುವನ್ನು ಹೊಡೆದು ಹಾಕಿದಂತೆ ಸಿದ್ದರಾಮಯ್ಯನವರನ್ನೂ ಹೊಡೆದು ಹಾಕೋಣ ಎಂದು ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿರುವ ಸಚಿವ ಅಶ‍್ವಥ್ ನಾರಾಯಣ್ ವಿರುದ್ಧ ಇದೀಗ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಕಿಡಿಕಾರಿದ್ದಾರೆ.

ಈ ಕುರಿತು  ಮಾತಾಡಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು, ಬಿಜೆಪಿ ನಾಯಕರ ಮಾತು ಅವರ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಆವೇಶದಲ್ಲಿ ಮಾತಾಡುವಾಗ ಅವರ ಹೃದಯದಲ್ಲಿರೋದು ಹೊರಗೆ ಬರುತ್ತದೆ, ದ್ವೇಷ ಮತ್ತು ಹಿಂಸೆಯೇ ಅವರ ಹಿಡನ್ ಅಜೆಂಡಾ, ಜನರ ಮುಂದೆ ಮಾತ್ರ ಮುಖವಾಡ ಧರಿಸಿ ಬರುತ್ತಾರೆ ಎಂದು ಹರಿಹಾಯ್ದರು.

ಹಾಗೆಯೇ ಈ ಕುರಿತು ಪ್ರತಿಕ್ರಿಯಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ,  ಅಶ್ವಥ್ ನಾರಾಯಣ್ ನಿನಗೆ ಏನಾಗಿದೆ. ಸಿದ್ದರಾಮಯ್ಯರನ್ನೇ ಹೊಡೆದು ಹಾಕಿ ಅನ್ನೋದು ತಪ್ಪು.  ಸಿದ್ಧರಾಮಯ್ಯ ಬೇರೆ ಪಾರ್ಟಿ ಇರಬಹುದು. ಅದ್ರೆ ಅವರು ವಿರೋಧ ಪಕ್ಷದ ನಾಯಕರಾಗಿದ್ದಾರೆ  ಡಿಜಿಯವರು ಎಫ್ ಐಆರ್ ಹಾಕಿ ಕ್ರಿಮಿನಲ್ ಕೇಸ್ ದಾಖಲಿಸಲಿ ಎಂದು ಆಗ್ರಹಿಸಿದರು.

Key words: Ashwath narayan-Controversial speech-against-Siddaramaiah-HDK -CM Ibrahim