ಹಿರೇಕೆರೂರು ಕ್ಷೇತ್ರದ ಟಿಕೆಟ್ ಗೆ ಫೈಟ್: ಬಿ.ಸಿ ಪಾಟೀಲ್ ಮತ್ತು ಯು.ಬಿ ಬಣಕಾರ್ ನಡುವಿನ ಸಂಧಾನ ವಿಫಲ

ಬೆಂಗಳೂರು, ಸೆ.25,2019(www.justkannada.in):  ಅಕ್ಟೋಬರ್ 21 ರಂದು 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡುವೆ ರಾಜ್ಯ ಬಿಜೆಪಿಯಲ್ಲಿ ಟಿಕೆಟ್ ಗಾಗಿ ಫೈಟ್ ಶುರುವಾಗಿದೆ.

ಈ ನಡುವೆ ಹಿರೇಕೆರೂರು ಕ್ಷೇತ್ರದ ಟಿಕೆಟ್ ಗಾಗಿ ಅನರ್ಹ ಶಾಸಕ ಬಿ.ಸಿ ಪಾಟೀಲ್ ಮತ್ತು ಮಾಜಿ ಶಾಸಕ ಯು.ಬಿ ಬಣಕಾರ್ ನಡುವೆ ಫೈಟ್ ಉಂಟಾಗಿದ್ದು ಇಬ್ಬರ ನಡುವೆ ಸಿಎಂ ಬಿಎಸ್ ಯಡಿಯೂರಪ್ಪ ಸಂಧಾನಕ್ಕೆ ಯತ್ನಿಸಿದ್ದರು. ಆದರೆ ಸಂಧಾನ ವಿಫಲವಾಗಿದೆ.

ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಟಿಕೆಟ್ ಗೆ ಸಂಬಂಧಿಸಿದಂತೆ ಬಿ.ಸಿ.ಪಾಟೀಲ್ ಮತ್ತು ಮಾಜಿ ಶಾಸಕ ಯು.ಬಿ.ಬಣಕಾರ್ ನಡುವೆ ಉಂಟಾಗಿರುವ ಮನಸ್ತಾಪವನ್ನು ಪರಿಹರಿಸಲು  ಸಿಎಂ ಬಿಎಸ್ ಯಡಿಯೂರಪ್ಪ  ನಿನ್ನೆ ತಡರಾತ್ರಿ ಇಬ್ಬರನ್ನು ತಮ್ಮ ಡಾಲರ್ಸ್ ಕಾಲೋನಿಯ ನಿವಾಸಕ್ಕೆ ಕರೆಸಿ  ಸಭೆ ನಡೆಸಿದ್ದರು.

ಈ ವೇಳೆ  ಬಿ.ಸಿ.ಪಾಟೀಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ನಮ್ಮ ಸರ್ಕಾರಕ್ಕೆ ಅಧಿಕಾರಕ್ಕೆ ಬರಲು ಕಾರಣವಾಯಿತು. ಅವರ ತ್ಯಾಗ ಬಹುದೊಡ್ಡದು. ಹೀಗಾಗಿ ಉಪ ಚುನಾವಣೆಯಲ್ಲಿ ಬಿ.ಸಿ ಪಾಟೀಲ್ ಪರ ಕೆಲಸ ಮಾಡಿ. ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಬಣಕಾರ್ ಅವರಿಗೆ ಸಿಎಂ ಬಿಎಸ್ ಯಡಿಯೂರಪ್ಪ ಮನವಿ ಮಾಡಿದರು.

ಆದರೆ ಸಿಎಂ ಬಿಎಸ್ ಯಡಿಯೂರಪ್ಪ ಮನವೊಲಿಕೆಗೆ ಬಗ್ಗದ ಯು.ಬಿ ಬಣಕಾರ್ , ಬಿ.ಸಿ ಪಾಟೀಲ್ ಜತೆ ಓಡಾಡಿದರೇ ಕಾರ್ಯಕರ್ತರ ಗತಿ ಏನು ಎಂದು ಸಿಎಂ ಬಿಎಸ್ ವೈ ಮುಂದೇ ಅಸಮಾಧಾನ ತೊಡಿಕೊಂಡಿದ್ದಾರೆ. ಹೀಗಾಗಿ ಸಿಎಂ ಬಿಎಸ್ ವೈ ನಡೆಸಿದ ಸಂಧಾನ ವಿಫಲವಾಗಿದೆ ಎನ್ನಲಾಗಿದೆ.

Key words: hirekerur- Assembly constituency-ticket-between- BC Patil – UB Banakar –fail-cm bs yeddyurappa