ಭಾರತಕ್ಕೆ ಬರಲು ನಾನು ತೀವ್ರ ಕಾತರನಾಗಿದ್ದೇನೆ- ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್…

ನವದೆಹಲಿ,ಫೆ,24,2020(www.justkannada.in): ಅಮೇರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಎರಡುದಿನಗಳ ಕಾಲ ಭಾರತ ಪ್ರವಾಸ ಕೈಗೊಂಡಿದ್ದು ಇಂದು ಅಹ್ಮದಾಬಾದ್ ಗೆ ಪತ್ನಿ ಜತೆ ಆಗಮಿಸಲಿದ್ದಾರೆ.

ಪತ್ನಿ ಮೆಲಾನಿಯಾ ಮತ್ತು ಉನ್ನತ ಮಟ್ಟದ ನಿಯೋಗದೊಂದಿಗೆ ಇಂದು ಬೆಳಗ್ಗೆ ಅಹ್ಮದಾಬಾದ್ ನ ಸರದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ  ಡೊನಾಲ್ಡ್ ಟ್ರಂಪ್ ಬಂದಿಳಿಯಲಿದ್ದಾರೆ. ಟ್ರಂಪ್ ಅವರನ್ನ ಸ್ವಾಗತಿಸಲು ಪ್ರಧಾನಿ ಮೋದಿ ಅಹ್ಮದಾಬಾದ್ ನತ್ತ ತೆರಳಿದ್ದಾರೆ.

ಈ ಮಧ್ಯೆ ಡೊನಾಲ್ಡ್ ಟ್ರಂಪ್ ಹಿಂದಿಯಲ್ಲಿ ಟ್ವೀಟ್ ಮಾಡಿ, ನಾನು ಭಾರತಕ್ಕೆ ಬರಲು ತೀವ್ರ ಕಾತರನಾಗಿದ್ದೇನೆ.ಇನ್ನು ಕೆಲವೇ ಗಂಟೆಗಳಲ್ಲಿ ನಾನು ಭಾರತದಲ್ಲಿರುತ್ತೇನೆ. ನಾವೀಗ ಮಾರ್ಗ ಮಧ್ಯದಲ್ಲಿದ್ದೇವೆ ಎಂದು ಹಿಂದಿಯಲ್ಲಿ  ಟ್ವೀಟ್ ಮಾಡಿದ್ದಾರೆ.

ಭಾರತಕ್ಕೆ ಆಗಮಿಸುವ ಟ್ರಂಪ್ ಮೊದಲಿಗೆ ಟ್ರಂಪ್ ಸಬರಮತಿ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ. ನಂತರ ಮಧ್ಯಾಹ್ನ 1 ಗಂಟೆಯ ನಂತರ ಮೋಟೆರಾ ಸ್ಟೇಡಿಯಂನಲ್ಲಿ ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

Key words: I am -desperate – come – India-US President- Donald Trump- tweeted