ಕಾಡಾನೆ ದಾಳಿಯಿಂದ ಯುವಕನಿಗೆ ಗಾಯ…

ಮೈಸೂರು,ಫೆ,24,2020(www.justkannada.in): ಕಾಡಾನೆ ದಾಳಿಯಿಂದ ಯುವಕ ಗಾಯಗೊಂಡಿರುವ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲ್ಲೂಕಿನಲ್ಲಿ ನಡೆದಿದೆ.

ಶಿವು ಆನೆದಾಳಿಗೆ ಸಿಲುಕಿ ಗಾಯಗೊಂಡ ಗಾಯಾಳು. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಬಳ್ಳೆ ಹಾಡಿಯಲ್ಲಿ ಈ ಘಟನೆ ನಡೆದಿದೆ. ಶಿವು ಮೀನು ಹಿಡಿಯಲು ನದಿ ಕಡೆ ತೆರಳಿದ್ದು ಈ ವೇಳೆ ಕಾಡಾನೆ ದಾಳಿ ನಡೆಸಿದೆ. ಕಾಡಾನೆ ದಾಳಿಯಿಂದ ಗಾಯಗೊಂಡ ಶಿವುವನ್ನ ಎಚ್ ಡಿ ಕೋಟೆ ಸರ್ಕಾರಿ  ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.  ಹೆಚ್ವಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.

Key words: Young man- injured –elephant –attack-hd kote