ಸಂಸದ ಪ್ರತಾಪ್ ಸಿಂಹ ಅವರ ಆರೋಪ ಸತ್ಯಕ್ಕೆ ದೂರವಾದದ್ದು- ಅಸಮಾಧಾನ ವ್ಯಕ್ತಪಡಿಸಿದ ಮೈಸೂರು ಮೇಯರ್ ತಸ್ನೀಂ…

ಮೈಸೂರು,ಜು,6,2020(www.justkannada.in): ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಯು.ಜಿ.‌ ಕೇಬಲ್ ಅಳವಡಿಸುತ್ತಿರುವರಿಗೆ ಹಾಗೂ ಕಟ್ಟಡ ನಿರ್ಮಿಸುತ್ತಿರುವವರಿಗೆ  ಪಾಲಿಕೆ ಸದಸ್ಯರು ವಿನಾಕಾರಣ ತೊಂದರೆ ನೀಡುತ್ತಿದ್ದಾರೆ ಎಂಬ ಸಂಸದ ಪ್ರತಾಪ್ ಸಿಂಹ ಮಾಡಿರುವ ಆರೋಪ ಸತ್ಯಕ್ಕೆ ದೂರವಾದುದು ಎಂದು  ಮೈಸೂರು ಮಹಾನಗರ ಪಾಲಿಕೆ ಮೇಯರ್ ತಸ್ನೀಂ ಕಿಡಿಕಾರಿದರು.

ಇಂದು ಸುದ್ಧಿಗೋಷ್ಠಿ ನಡೆಸಿ ಸಂಸದ ಪ್ರತಾಪ್ ಸಿಂಹ ವಿರುದ್ದ ಅಸಮಾಧಾನ ಹೊರ ಹಾಕಿದ ಮೇಯರ್ ತಸ್ನೀಂ, ಈ ಬಗ್ಗೆ ಸಂಸದ ಪ್ರತಾಪ್ ಸಿಂಹ  ಮಾಡಿರುವ ಆರೋಪ ನಮಗೆ ನೋವುಂಟು ಮಾಡಿದೆ. ಈ ಕುರಿತಾದ ಸಾಕ್ಷ್ಯಾಧಾರ ಅಥವಾ ಲಿಖಿತ ದೂರು ನೀಡದೇ ಆರೋಪ ಮಾಡಿರುವುದು ಸರಿಯಲ್ಲ. ಕೌನ್ಸಿಲ್ ಸಭೆಯಲ್ಲಿ ಭಾಗವಹಿಸಿ ವಸೂಲಾತಿ ಮಾಡುತ್ತಿರುವ ಸದಸ್ಯರುಗಳನ್ನು ಪ್ರಶ್ನಿಸಲು ಸಂಸದರಿಗೆ ಅವಕಾಶವಿದೆ. ಆದರೂ ಸಂಸದ ಪ್ರತಾಪ್ ಸಿಂಹ ವಿನಾಕಾರಣ ಆರೋಪ ಮಾಡಿರುವುದು ಸರಿಯಲ್ಲ ಎಂದರು.

ಆರೋಪ ಸಾಬೀತು ಮಾಡಿದರೆ ರಾಜೀನಾಮೆ ನೀಡಲು ಸಿದ್ದ…

ಇದೇ ವೇಳೆ ಮೈಸೂರು ಮಹಾನಗರ ಪಾಲಿಕೆ ವರ್ಕ್ ಕಮಿಟಿ ಅಧ್ಯಕ್ಷ ಹಶ್ರತ್ ಉಲ್ಲ ಮಾತನಾಡಿ,  ಮೈಸೂರು ಮಹಾನಗರ ಪಾಲಿಕೆಯ ವರ್ಕ್ ಕಮಿಟಿ‌ಯಲ್ಲಿ ಬಿಜೆಪಿಯ ಇಬ್ಬರು ಸದಸ್ಯರು ಇದ್ದಾರೆ. ಮಹಾನಗರ ಪಾಲಿಕೆ ಸದಸ್ಯರ ವಿರುದ್ಧ ಸಂಸದ ಪ್ರತಾಪ್ ಸಿಂಹ ಮಾಡಿರುವ ಆರೋಪವನ್ನು ಸಾಬೀತು ಮಾಡಿದರೆ ರಾಜೀನಾಮೆ ನೀಡಲು ಸಿದ್ದ ಎಂದು ಸವಾಲು ಹಾಕಿದರು.mp-pratap-simha-allegations-mysore-mayor-tasneem

ಮೈಸೂರು ಮಹಾನಗರ ಪಾಲಿಕೆ ಸದಸ್ಯರು ವಸೂಲಿ ಕೆಲಸಕ್ಕಿಳಿದಿದ್ದಾರೆಂದು ಸಂಸದ ಪ್ರತಾಪ್ ಸಿಂಹ ಮಾಡಿರುವ ಆರೋಪದಿಂದ ತುಂಬಾ ನೋವಾಗಿದೆ. ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವ ನಗರ ಪಾಲಿಕೆ ಸದಸ್ಯರುಗಳನ್ನು ಸಂಸದರು ಅವಮಾನಿಸಿರುವುದು ಖಂಡನೀಯ. ಜೆಎಸ್ ಎಸ್ ಲೇ ಔಟ್ ನಲ್ಲಿ ದೂರು ಬಂದ ಹಿನ್ನೆಲೆ ಸ್ಥಳಕ್ಕೆ ಪರಿಶೀಲನೆ ಮಾಡಿದ್ದೇವೆ ಎಂದು ಹಶ್ರತ್ ಉಲ್ಲ ಸ್ಪಷ್ಟನೆ ನೀಡಿದರು.

ಸಂಸದ ಪ್ರತಾಪ್ ಸಿಂಹ ಅವರ  ಹೇಳಿಕೆಗೆ ಮೈಸೂರು ಮಹಾನಗರ ಪಾಲಿಕೆ ವರ್ಕ್ ಕಮಿಟಿ ಸದಸ್ಯರು ಖಂಡಿಸಿದ್ದಾರೆ. ರಾಜ್ಯದಲ್ಲಿ ಅವರದ್ದೇ ಸರ್ಕಾರ ಇದ್ದು, ಅವರಿಗೆ ಬೇಕಾದ ಅಧಿಕಾರುಗಳೇ  ಇದ್ದಾರೆ. ಸಂಸದರಿಗೆ ನಗರದ ಜವಾಬ್ದಾರಿ ಇದೆ. ಸಂಸದರು ಪಾಲಿಕೆ ಸದಸ್ಯರು ಜೊತೆ ಒಂದು ಮೀಟಿಂಗ್ ಕೂಡ ಮಾಡಿಲ್ಲ. ಓಟಿಂಗ್ ಮಾಡುವ ಸಂದರ್ಭ ಮಾತ್ರ ಪಾಲಿಕೆಗೆ ಬರುತ್ತಾರೆ. ಅವರಂತೆ ನಾವು ಜನಪ್ರತಿನಿಧಿ ಈ ರೀತಿ ಅವಮಾನ ಮಾಡುವುದು ಸರಿಯಲ್ಲ ಎಂದು ಸಂಸದ ಪ್ರತಾಪ್ ಸಿಂಹ ಅವರ ವಿರುದ್ದ ಪಾಲಿಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

Key words: MP- Pratap Simha- allegations -Mysore –Mayor- Tasneem