Thursday, August 6, 2026

BDA Apartments

Home Front Page ಹೈಕೋರ್ಟ್ ತೀರ್ಪು ಎಲ್ಲರೂ ಪಾಲಿಸಿ:ವಿದ್ಯಾರ್ಥಿಗಳು ಶಿಕ್ಷಣದ ಕಡೆ ಗಮನಹರಿಸಿ- ಸಿಎಂ ಬೊಮ್ಮಾಯಿ.

ಹೈಕೋರ್ಟ್ ತೀರ್ಪು ಎಲ್ಲರೂ ಪಾಲಿಸಿ:ವಿದ್ಯಾರ್ಥಿಗಳು ಶಿಕ್ಷಣದ ಕಡೆ ಗಮನಹರಿಸಿ- ಸಿಎಂ ಬೊಮ್ಮಾಯಿ.

ಬೆಂಗಳೂರು,ಮಾರ್ಚ್,15,2022(www.justkannada.in):  ಹಿಜಾಬ್ ಕುರಿತು ಹೈಕೋರ್ಟ್ ನೀಡಿರುವ ತೀರ್ಪನ್ನ ಎಲ್ಲರೂ ಪಾಲಿಸಿ. ವಿದ್ಯಾರ್ಥಿಗಳು ಶಿಕ್ಷಣದತ್ತ ಗಮನಹರಿಸಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.

ಹೈಕೋರ್ಟ್ ತೀರ್ಪು ಕುರಿತು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು.  ಎಲ್ಲಾ ವಿದ್ಯಾರ್ಥಿಗಳು ಹೈಕೋರ್ಟ್ ತೀರ್ಪು ಪಾಲಿಸಬೇಕು.   ವಿದ್ಯಾರ್ಥಿಗಳಿಗೆ ಶಿಕ್ಷಣ ಮುಖ್ಯ ಹೀಗಾಗಿ ಹೈಕೋರ್ಟ್ ತೀರ್ಪು ಪಾಲಿಸಿ. ಪರೀಕ್ಷೆಗೆ ಗೈರಾಗದಂತೆ ವಿದ್ಯಾರ್ಥಿಗಳಿಗೆ ಮನವಿ ಮಾಡಿದರು.coronavirus-vaccine-tough-action-home-minister-basavaraja-bommaicm bommai

ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಭದ್ರತೆ ವಹಿಸಲಾಗಿದೆ.  ರಾಜ್ಯದಲ್ಲಿ ಗೃಹ ಇಲಾಖೆ ಎಲ್ಲಾ ಸಿದ‍್ಧತೆ ಮಾಡಿಕೊಂಡಿದೆ. ಕಾನೂನು ಕೈಗೆತ್ತಿಕೊಂಡರೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಬೊಮ್ಮಾಯಿ ಎಚ್ಚರಿಕೆ ನೀಡಿದರು.

Key words: High Court-hijab-CM Basavaraj bommai