ಮೂವರು ಬಿಜೆಪಿ ನಾಯಕರಿಗೆ ದೆಹಲಿಗೆ ಬರುವಂತೆ ಹೈಕಮಾಂಡ್ ಬುಲಾವ್.

ಬೆಂಗಳೂರು,ನವೆಂಬರ್,2,2023(www.justkannada.in):  ದೆಹಲಿಗೆ ಬರುವಂತೆ ಮೂವರು ಬಿಜೆಪಿ ನಾಯಕರಿಗೆ ಬಿಜೆಪಿ ಹೈಕಮಾಂಡ್ ಬುಲಾವ್ ನೀಡಿದೆ.

ಹೈಕಮಾಂಡ್​ ಬುಲಾವ್​ ಹಿನ್ನೆಲೆ ಬಿಜೆಪಿ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ಎಂಎಲ್​ಸಿ ಕೋಟ ಶ್ರೀನಿವಾಸ್​ ಪೂಜಾರಿ, ಸಂಸದ ಬಿ.ಸಿ.ಮೋಹನ್​​ ಅವರು ದೆಹಲಿಗೆ ತೆರಳಿದ್ದಾರೆ. ದೆಹಲಿ ಬಿಜೆಪಿ ಕಚೇರಿಯಲ್ಲಿ ಭೇಟಿಯಾಗಲು ವರಿಷ್ಠರು ಸೂಚಿಸಿದ್ದು ಇಂದು ಮಧ್ಯಾಹ್ನ 3.30ಕ್ಕೆ ನಾಯಕರು ವರಿಷ್ಠರನ್ನು ಭೇಟಿಯಾಗಲಿದ್ದಾರೆ.

ಕಳೆದ ವಾರ ಮಾಜಿ ಸಿಎಂ ಡಿವಿ ಸದಾನಂದಗೌಡರಿಗೆ  ಹೈಕಮಾಂಡ್ ಬುಲಾವ್ ನೀಡಿತ್ತು. ಆದರೆ  ಭೇಟಿ ಮಾಡದೇ  ಡಿವಿ ಸದಾನಂದಗೌಡರನ್ನ ವಾಪಸ್ ಕಳಿಸಿಕೊಟ್ಟಿದ್ದರು.

Key words: High Command- Bulav – three- BJP leaders – come – Delhi.