ಸಿಎಂ ಸಿದ್ದರಾಮಯ್ಯ ಕರ್ನಾಟಕದ ಬ್ರಾಂಡ್ ಅಂಬಾಸಿಡರ್- ಸಚಿವ ಸಂತೋಷ್ ಲಾಡ್.

ಹುಬ್ಬಳ್ಳಿ,ನವೆಂಬರ್,1,2023(www.justkannada.in): ಸಿಎಂ ಸಿದ್ಧರಾಮಯ್ಯ ಕರ್ನಾಟಕದ ಬ್ರಾಂಡ್ ಅಂಬಾಸಿಡರ್ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಬಣ್ಣಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸಂತೋಷ್ ಲಾಡ್, ಸಿದ್ಧರಾಮಯ್ಯ ನೇತೃತ್ವದಲ್ಲಿ  ಕನ್ನಡ ಉಳಿಸಿ ಬೆಳೆಸಲು ನಾವು ಬದ್ಧ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು 5 ತಿಂಗಳಾಗಿದೆ.  ಆಗಲೇ ಸರ್ಕಾರ ಬೀಳಿಸುತ್ತೇವೆ  ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. 6 ತಿಂಗಳು ಸುಮ್ಮನಿರಿ ಸರ್ಕಾರ ಬೀಳಿಸುವುದು ಬಿಜೆಪಿಗೆ ಹೊಸದಲ್ಲ. ಸರ್ಕಾರ ಬೀಳೀಸುತ್ತೇವೆ ಅನ್ನೋದನ್ನ ಕೇಳಿ ಕೇಳಿ ಸಾಕಾಗಿದೆ. ನಮ್ಮ ಶಾಸಕರಿಗೆ ಅಮಿಷ ಒಡ್ಡುತ್ತಿದ್ದಾರೆ. ಆದರೆ ನನ್ನನ್ನು ಯಾರು ಟಚ್ ಮಾಡಲು ಆಗುವುದಿಲ್ಲ ಎಂದು ಹೇಳಿದರು.s

Key words: CM Siddaramaiah –Karnataka- Brand -Ambassador- Minister -Santosh Lad.