ಹುಲಿ ಸೆರೆಗೆ ಶೀಘ್ರದಲ್ಲೇ ಕಾರ್ಯಾಚರಣೆ; ಆನೆಗಳನ್ನ ಬಳಸಿಕೊಳ್ಳಲು ನಿರ್ಧಾರ- ಶಾಸಕ ದರ್ಶನ್ ಧ್ರುವನಾರಾಯಣ್.

ಮೈಸೂರು, ನವೆಂಬರ್,2,2023(www.justkannada.in):  ಮೈಸೂರಿನಲ್ಲಿ ದನ ಮೇಯಿಸುತ್ತಿದ್ದ ರೈತನ ಮೇಲೆ ಹುಲಿ ದಾಳಿ ಪ್ರಕರಣ ಸಂಬಂಧ , ಹುಲಿ ಸೆರೆಗೆ ಶೀಘ್ರದಲ್ಲೇ ಕಾರ್ಯಾಚರಣೆ ಪ್ರಾರಂಭಿಸಲಾಗುತ್ತದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಭರವಸೆ ನೀಡಿದ್ದಾರೆ.

ನಂಜನಗೂಡು ತಾಲೂಕಿನ ಮಹದೇವರನಗರ ಗ್ರಾಮದಲ್ಲಿ ರೈತನ ಮೇಲೆ ಹುಲಿ ದಾಳಿ ನಡೆಸಿತ್ತು. ಈ ವೇಳೆ ರೈತ ವೀರಭದ್ರ ಭೋವಿ ಅವರು ಗಂಭೀರ ಗಾಯಗೊಂಡಿದ್ದಾರೆ. ಅಲ್ಲದೆ ಪದೇ ಪದೇ ಹುಲಿ ದಾಳಿಯಿಂದ ಬೇಸತ್ತ ಜನರು ಅರಣ್ಯ ಇಲಾಖೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಕುರಿತು ಮಾತನಾಡಿರುವ ಶಾಸಕ ದರ್ಶನ್ ಧ್ರುವನಾರಾಯಣ್, ಹುಲಿ ಸೆರೆಗೆ ಶೀಘ್ರದಲ್ಲೇ ಕೂಂಬಿಂಗ್ ಆಪರೇಷನ್ ಆರಂಭಿಸಲಾಗುತ್ತದೆ. ಹುಲಿ ಸೆರೆಗೆ ಆನೆಗಳನ್ನ ಬಳಸಿಕೊಳ್ಳಲಾಗುತ್ತದೆ  ಎಂದು ಶಾಸಕ ದರ್ಶನ್ ಧ್ರುವನಾರಾಯಣ್  ತಿಳಿಸಿದರು.

ಹುಲಿ ದಾಳಿಯಲ್ಲಿ ಗಾಯಗೊಂಡ ರೈತ ವೀರಭದ್ರ ಭೋವಿ ಅವರ ಖರ್ಚು ವೆಚ್ಚಗಳನ್ನು ಸರ್ಕಾರ ಮತ್ತು ಅರಣ್ಯ ಇಲಾಖೆ ಭರಿಸುತ್ತದೆ. ನಾನು ಕೂಡ ವೈಯಕ್ತಿಕವಾಗಿ ಪರಿಹಾರ ನೀಡಿ ಆತ್ಮಸ್ಥೈರ್ಯ ತುಂಬಿದ್ದೇನೆ ಎಂದರು.

Key words: Operation soon -capture –tiger-  MLA -Darshan Dhruvanarayan.