Friday, October 2, 2026

BDA Apartments

Home Front Page ಸ್ನೇಹಿತನ ಮದುವೆಯಲ್ಲಿ ಗಿಫ್ಟ್ ನೀಡುವಾಗಲೇ ಹೃದಯಾಘಾತ: ಯುವಕ ಸಾವು

ಸ್ನೇಹಿತನ ಮದುವೆಯಲ್ಲಿ ಗಿಫ್ಟ್ ನೀಡುವಾಗಲೇ ಹೃದಯಾಘಾತ: ಯುವಕ ಸಾವು

ಸ್ನೇಹಿತನ ಮದುವೆಯಲ್ಲಿ ಗಿಫ್ಟ್ ನೀಡುವಾಗಲೇ ಹೃದಯಾಘಾತ: ಯುವಕ ಸಾವು puliyogare,ayyangar Wh...

ಕರ್ನೂಲ್, ನವೆಂಬರ್,22,2024 (www.justkannada.in): ಸ್ನೇಹಿತನ ಮದುವೆಗೆ ತೆರಳಿ ಗಿಫ್ಟ್ ನೀಡುವ ವೇಳೆ ಯುವಕನೊಬ್ಬ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ನಲ್ಲಿ ನಡೆದಿದೆ.

ಬೆಂಗಳೂರು ಮೂಲದ ಅಮೆಜಾನ್ ಉದ್ಯೋಗಿಯಾಗಿರುವ ವಂಶಿ ಹೃದಯಾಘಾತದಿಂದ ಮೃತಪಟ್ಟ ಯುವಕ. ತನ್ನ ಸ್ನೇಹಿತನ ಮದುವೆಯಲ್ಲಿ ಪಾಲ್ಗೊಳ್ಳಲು ಆಂಧ್ರಪ್ರದೇಶದ ಪೆನುಮಡ ಗ್ರಾಮಕ್ಕೆ ತೆರಳಿದ್ದರು. ಈ ಮಧ್ಯೆ ಸ್ನೇಹಿತರ ಜೊತೆ ಸೇರಿ ವರನಿಗೆ  ಉಡುಗೊರೆ ನೀಡಿದ್ದಾರೆ.

ಬಳಿಕ ವರ ಗಿಫ್ಟ್ ತೆರೆಯುತ್ತಿದ್ದ ವೇಳೆ ವಂಶಿಗೆ ಹೃದಯಾಘಾತವಾಗಿದೆ. ವಂಶಿ ತನ್ನ ಎಡಕ್ಕೆ ಬಾಗಿ ಕುಸಿದು ಬೀಳುತ್ತಿದ್ದಂತೆ ಸ್ನೇಹಿತರು ಆತನನ್ನು ಹಿಡಿದುಕೊಳ್ಳುತ್ತಾರೆ. ಕೂಡಲೇ ಸ್ನೇಹಿತರು ವಂಶಿಯನ್ನು ಆಸ್ಪತ್ರೆಗೆ ಸಾಗಿಸಿದ್ದು, ಆದರೆ  ಹೃದಯಾಘಾತದಿಂದ ಈಗಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದೆ.

Key words: Young man, dies, heart attack, friend’s wedding